ಮಡಿಕೇರಿ : ಕೊಡಗು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಹೈಡ್ರೋ ಗಾಂಜಾ ಪೆಡ್ಲರ್ಸ್ಗಳನ್ನು ಅರೆಸ್ಟ್ ಮಾಡಿದ್ದಾರೆ. ಥೈಲ್ಯಾಂಡ್ನಿಂದ ಕೊಡಗಿನ ಮೂಲಕ ಕೇರಳ & ದುಬೈಗೆ ಹೈಡ್ರೋ ಗಾಂಜಾ ಸಾಗಾಟ ಮಾಡ್ತಿದ್ದರು.
ಕೊಡಗು ಹಾಗೂ ಕೇರಳ ಮೂಲದ 7 ಅಂತಾರಾಷ್ಟ್ರೀಯ ಗಾಂಜಾ ಪೆಡ್ಲರ್ಸ್ ಬಂಧನ ಆಗಿದ್ದು, ಬರೋಬ್ಬರಿ ಮೂರುವರೆ ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಕೇರಳ ಮೂಲದ ಮೆಹರೂಫ್ ಮತ್ತು ರಿಯಾಜ್ ಪಿ. ಎಂ & ಮಡಿಕೇರಿಯ ನಾಪೋಕ್ಲುವಿನ ಅಕನಾಸ್ ಎಂ.ಎನ್, ಯಾಹ್ಯಾ ಸಿ.ಎಚ್, ಆರ್ಜಿ ಗ್ರಾಮದ ರವೂಫ್, ಬೆಟೋಳಿ ಗ್ರಾಮದ ವಾಜಿದ್ ಸಿ.ಇ, ಗುಂಡಿಗೆರೆಯ ನಾಸೂರುದ್ದೀನ್ ಎಂ.ಯು ಬಂಧಿತರು.
ಬಂಧಿತರಿಂದ 3 ಕೆ.ಜಿ. 31 ಗ್ರಾಂ ತೂಕದ ಹೈಡ್ರೋ ಗಾಂಜಾ & ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೊಡಗು ಎಸ್.ಪಿ. ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ನನಗೆ ನಾನೇ ಬಿಗ್ ಬಾಸ್ ಎಂದ ಜಗದೀಶ್ ಲಾಯರೇ ಅಲ್ವಾ? – ಪ್ರಶಾಂತ್ ಸಂಬರಗಿ ಸ್ಫೋಟಕ ಹೇಳಿಕೆ..!
Post Views: 234