Download Our App

Follow us

Home » ರಾಷ್ಟ್ರೀಯ » ಮತ್ತೆ ಬಿಜೆಪಿ ತೆಕ್ಕೆಗೆ ಚಂದ್ರಬಾಬು ನಾಯ್ಡು : NDA ಮೈತ್ರಿಕೂಟ ಸೇರಲು ಅಮಿತ್​ ಶಾ ಜೊತೆ ಮಹತ್ವದ ಮೀಟಿಂಗ್​​..!

ಮತ್ತೆ ಬಿಜೆಪಿ ತೆಕ್ಕೆಗೆ ಚಂದ್ರಬಾಬು ನಾಯ್ಡು : NDA ಮೈತ್ರಿಕೂಟ ಸೇರಲು ಅಮಿತ್​ ಶಾ ಜೊತೆ ಮಹತ್ವದ ಮೀಟಿಂಗ್​​..!

ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ.

ನಿನ್ನೆ ರಾತ್ರಿ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಚಂದ್ರಬಾಬು ನಾಯ್ಡು ಭೇಟಿ ನೀಡಿ ಮೈತ್ರಿ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಚಂದ್ರಬಾಬು ನಾಯ್ಡು NDA ಮೈತ್ರಿಕೂಟ ಸೇರಲು ಅಮಿತ್​ ಶಾ ಹಾಗೂ ಜೆಪಿ ನಡ್ಡಾ ಜೊತೆ ಮಹತ್ವದ ಮೀಟಿಂಗ್​​ ಮಾಡಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ TDP ಜತೆ ಬಿಜೆಪಿ ಮೈತ್ರಿ ಬಗ್ಗೆ ನಾಯಕರು ಸುಮಾರು ಒಂದೂವರೆ ಗಂಟೆಕಾಲ ಚರ್ಚಿಸಿದ್ದಾರೆ.

ಎರಡು ದಿನಗಳ ಹಿಂದೆ ನಾಯ್ಡು ಅವರನ್ನು ಪವನ್​ ಕಲ್ಯಾಣ್ ಭೇಟಿಯಾಗಿದ್ದ​​, ಹಾಗಾಗಿ ಆಂಧ್ರದಲ್ಲಿ BJP ಜತೆ TDP ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. BJP, TDP, ಜನಸೇನಾ ನೇತೃತ್ವದಲ್ಲಿ ಮೈತ್ರಿ ರಚನೆಯ ಸಾಧ್ಯತೆಯಿದ್ದು, ಚಂದ್ರಬಾಬು ನಾಯ್ಡು 2019ರಲ್ಲಿ NDA ಮೈತ್ರಿಕೂಟ ತೊರೆದಿದ್ದರು. ಕಳೆದ ಜೂನ್​ನಲ್ಲೇ ಅಮಿತ್​ ಶಾ ಜತೆ ಒಂದು ಸುತ್ತಿನ ಚರ್ಚೆ ನಡೆಸಿದ್ರು, ಇದೀಗ ಮತ್ತೆ ನಾಯ್ಡು ಮೈತ್ರಿ ಚರ್ಚೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯನವರಿಂದ ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ..!

Leave a Comment

RELATED LATEST NEWS

Top Headlines

ಪೋಕ್ಸೋ ಕೇಸ್​ನಲ್ಲಿ ವಾರೆಂಟ್ ಜಾರಿ : ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್..!

ಬೆಂಗಳೂರು : ಪೋಕ್ಸೊ ಕೇಸ್​ನಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪಗೆ ಕೋರ್ಟ್​ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್​​ ಆಗಲಿದ್ದಾರೆ.

Live Cricket

Add Your Heading Text Here