ಬೆಂಗಳೂರು : ಬೆಂಗಳೂರಿನ ಬಹುತೇಕ ಭಾಗದಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. BWSSB ಮೇಂಟೆನೆನ್ಸ್ ವರ್ಕ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ರಿಂದ ನಾಳೆ ಸಂಜೆ 6 ಗಂಟೆ ತನಕ ನೀರು ಪೂರೈಕೆ ಸ್ಥಗಿತವಾಗಲಿದೆ.
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹಾಗಾಗಿ ಕುಡಿಯುವ ನೀರಿನ ಕೊರತೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಎಲ್ಲಿ ನೀರು ಪೂರೈಕೆ ಸ್ಥಗಿತ?
ನಂದಿನಿ ಲೇಔಟ್, BHEL ಲೇಔಟ್, ಮಲ್ಲತ್ತಹಳ್ಳಿ, ಮೈಸೂರು ರೋಡ್, ಶಿವಣ್ಣ ಲೇಔಟ್, ಪ್ರಶಾಂತ್ ನಗರ, ತಿಮ್ಮೇನಹಳ್ಳಿ, ಗೋವಿಂದರಾಜನಗರ, KHB ಕಾಲೋನಿ, ದಾಸರಹಳ್ಳಿ, ಶಿವಣ್ಣ ಲೇಔಟ್, GKW ಲೇಔಟ್, ಬಸವೇಶ್ವರ ಲೇಔಟ್, ನಂಜರಾಸಪ್ಪ ಲೇಔಟ್, ವಿದ್ಯಾರಣ್ಯಪುರ, ಸಿಂಗಾಪುರ, ಎಂಎಸ್ ಪಾಳ್ಯ, ರಾಮಚಂದ್ರಾಪುರ, ಡಿಫೆನ್ಸ್ ಲೇಔಟ್, BEL ರೋಡ್, ಡಾಲರ್ಸ್ ಕಾಲೋನಿ, ಚಾಮುಂಡಿನಗರ, ಭುವನೇಶ್ವರಿ ನಗರ, ಈಜಿಪುರ, ಮುನೇಶ್ವರ ಟೆಂಪಲ್ ರೋಡ್, ಅಕ್ಕಮ್ಮ ರೋಡ್, ಮುನಿಯಪ್ಪ ರೋಡ್, ಸಂಜಯ್ ನಗರ, ರಾಮಾಂಜನೇಯ ಲೇಔಟ್, ಶಾಂಬೋಗ್ ಲೇಔಟ್, ವೀರಪ್ಪ ರೆಡ್ಡಿ ಲೇಔಟ್, ರೈನ್ಬೋ ಲೇಔಟ್, ವಿನಾಯಕ ಲೇಔಟ್, ಮಂಜುನಾಥ ಲೇಔಟ್, ಡಿಫೆನ್ಸ್ ಲೇಔಟ್ , ಬಸವೇಶ್ವರ ಲೇಔಟ್ನಲ್ಲಿ ವ್ಯತ್ಯಯ ಆಗಲಿದೆ.
ಇದನ್ನೂ ಓದಿ : ಶೇ.60 ರಷ್ಟು ಕನ್ನಡ ನಾಮಫಲಕ ಜಾರಿಗೆ 2 ದಿನ ಬಾಕಿ : ಮತ್ತೆ ಹೋರಾಟಕ್ಕೆ ಕರವೇ ಸಜ್ಜು..!