Download Our App

Follow us

Home » ರಾಜ್ಯ » ಶೇ.60 ರಷ್ಟು ಕನ್ನಡ ನಾಮಫಲಕ ಜಾರಿಗೆ 2 ದಿನ ಬಾಕಿ : ಮತ್ತೆ ಹೋರಾಟಕ್ಕೆ ಕರವೇ ಸಜ್ಜು..!

ಶೇ.60 ರಷ್ಟು ಕನ್ನಡ ನಾಮಫಲಕ ಜಾರಿಗೆ 2 ದಿನ ಬಾಕಿ : ಮತ್ತೆ ಹೋರಾಟಕ್ಕೆ ಕರವೇ ಸಜ್ಜು..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಶೇಕಡ 60ರಷ್ಟು ಭಾಗ ಕನ್ನಡ ಭಾಷೆಯ ನಾಮಫಲಕ ಅಳವಡಿಕೆಗೆ ಕೇವಲ 2 ದಿನ ಬಾಕಿ ಉಳಿದಿದ್ದರೂ ಅನೇಕ ಕಡೆ ಅನ್ಯ ಭಾಷೆಯ ನಾಮಫಲಕಗಳು ರಾಜಾಜಿಸುತ್ತಿವೆ.

ಹಾಗಾಗಿ ಕನ್ನಡ ಬೋರ್ಡ್​ಗಾಗಿ ಮತ್ತೆ ಹೋರಾಟಕ್ಕೆ ಕರವೇ ಸಜ್ಜಾಗಿದೆ. 60% ಕನ್ನಡ ನಾಮಪಲಕ ಕಡ್ಡಾಯ ಅಳವಡಿಕೆಗೆ ಕರವೇ ಫೆಬ್ರವರಿ 28ರ ಗಡುವು ನೀಡಿತ್ತು. ಇದೀಗ ಶೇ.60ರಷ್ಟು ಕನ್ನಡ ಬಳಸದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸದ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಆದರೂ ನಗರದ ಮಲ್ಲೇಶ್ವರ, ಯಶವಂತಪುರ, ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಆರ್.ಆರ್‌.ನಗರ, ಕೋರಮಂಗಲ, ಜಯನಗರ, ಎಚ್‌ಎಸ್‌ಆರ್‌ ಲೇಔಟ್‌, ಎಂ.ಜಿ ರಸ್ತೆ, ರೆಸಿಡೆನ್ಸಿ ರಸ್ತೆ ಸೇರಿದಂತೆ ಅನೇಕ ಕಡೆ ಇಂದಿಗೂ ಅನ್ಯ ಭಾಷೆಯ ನಾಮ ಫಲಕಗಳ ನೇತಾಡುತ್ತಿವೆ.

ಹಾಗಾಗಿ ಮಾರ್ಚ್​ 1ರವರೆಗೂ ಕರವೇ ಸರ್ಕಾರದ ನಡೆ ನೋಡಲಿದ್ದು, ಸರ್ಕಾರ ಕ್ರಮ ಕೈಗೊಳ್ಳದೇ ಇದ್ರೆ ಮಾರ್ಚ್​ 1ರ ನಂತರ ರಕ್ಷಣಾ ವೇದಿಕೆ ಮತ್ತೆ ಹೋರಾಟ ಮಾಡಲಿದೆ. ಮಾರ್ಚ್​ 1ರಂದು ಬೆಂಗಳೂರಿನಲ್ಲಿ ರಕ್ಷಣಾ ವೇದಿಕೆ ಮೀಟಿಂಗ್​​ ನಡೆಸಲಿದೆ.

ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಬಹುತೇಕ ಅಂಗಡಿ, ಕಚೇರಿಗಳಲ್ಲಿ ಕನ್ನಡ ಬೋರ್ಡ್​ ಹಾಕಿಲ್ಲ. ಅನ್ಯಭಾಷೆ ಬೋರ್ಡ್​ ಬದಲಾಯಿಸದೇ ಇದ್ದರೆ ಜೈಲ್​ ಭರೋ ಎಚ್ಚರಿಕೆ, ಕನ್ನಡಕ್ಕಾಗಿ ನಾನು ನರಕಕ್ಕೆ ಹೋಗಲೂ ರೆಡಿ ಎಂದಿದ್ದರು ಕುವೆಂಪು. ನಾವು ಕನ್ನಡ ಬೋರ್ಡ್​ಗಾಗಿ ಜೈಲಿಗೆ ಹೋಗಲು ಹೆದರುತ್ತೀವಾ..? ಸಾವಿರಾರು ಕರವೇ ಕಾರ್ಯಕರ್ತರು ಜೈಲಿಗೆ ಹೋಗಲು ಸಿದ್ದರಾಗಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆ : ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ತಂತ್ರ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here