Download Our App

Follow us

Home » ಕ್ರೀಡೆ » 42ನೇ ವಯಸ್ಸಿನಲ್ಲೂ ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ MSD – ಅಭಿಮಾನಿಗಳು ಫಿದಾ..!

42ನೇ ವಯಸ್ಸಿನಲ್ಲೂ ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ MSD – ಅಭಿಮಾನಿಗಳು ಫಿದಾ..!

ಐಪಿಎಲ್ 2024ಕ್ಕೆ ಭರ್ಜರಿ ಆರಂಭ ಸಿಕ್ಕಿದ್ದು, ಈ ಬಾರಿಯ ಟೂರ್ನಿ ಹಲವು ವಿಶೇಷತೆಗಳಿಂದ ಕೂಡಿದೆ. 17ನೇ ಆವೃತ್ತಿಯ ಪ್ರತಿಯೊಂದು ಪಂದ್ಯಗಳಿಗೂ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದು, ನಿನ್ನೆ ನಡೆದ ಸಿಎಸ್​ಕೆ  ಹಾಗೂ ಗುಜರಾತ್ ಟೈಟಾನ್ಸ್‌  ಪಂದ್ಯದಲ್ಲಿ ಗಿಲ್ ನಾಯಕ್ವದ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ರುತುರಾಜ್ ಪಡೆ ಹೀನಾಯ ಸೋಲುಣಿಸಿದೆ.

ಇದೀಗ, ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್‌ ಧೋನಿ ಹಿಡಿದ ಸ್ಟನ್ನಿಂಗ್‌ ಕ್ಯಾಚ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಸದ್ಯ ಆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿಯುವ ಮೂಲಕ ಸಿಎಸ್​ಕೆ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

ಹೌದು, 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಾ ಬಂದಿದ್ದಾರೆ. ಇದೀಗ, ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಣೆ ಮಾಡಿರುವ ಎಂ.ಎಸ್‌ ಧೋನಿ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

ನಿವೃತ್ತಿಯ ಅಂಚಿನಲ್ಲಿದ್ದರು ಚಿರಯುವಕನಂತೆ ಮೈದಾನದಲ್ಲಿ ಉತ್ಸಾಹದಿಂದ ಪಂದ್ಯವನ್ನಾಡುತ್ತಿದ್ದಾರೆ. ಗುಜರಾತ್‌ ವಿರುದ್ಧ ಮಹಿ ಹಿಡಿದ ಸ್ಟನ್ನಿಂಗ್‌ ಕ್ಯಾಚ್‌ ಇದಕ್ಕೆ ತಾಜಾ ಉದಾಹರಣೆಯಾಗಿದೆ. 206 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಟೈಟಾನ್ಸ್‌ ಪಡೆ ಆರಂಭದಲ್ಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಷ್ಟಕ್ಕೀಡಾಯಿತು.
8ನೇ ಓವರ್‌ನಲ್ಲಿ ಡೇರಿಲ್‌ ಮಿಚೆಲ್‌ ಬೌಲಿಂಗ್‌ ವೇಳೆ ಕ್ರೀಸ್‌ನಲ್ಲಿದ್ದ ವಿಜಯ್‌ ಶಂಕರ್‌ ಸ್ಟ್ರೈಕ್‌ ಮಾಡಲು ಮುಂದಾದರು. ಮಿಚೆಲ್‌ ಎಸೆದ 3ನೇ ಎಸೆತವು ಬ್ಯಾಟ್‌ಗೆ ತಗುಲಿ ಸ್ಲಿಪ್‌ ವಿಭಾಗದಲ್ಲಿ ಬೌಂಡರಿ ತಲುಪುವ ಸಾಧ್ಯತೆ ಇತ್ತು. ಆದ್ರೆ ಮಹಿ ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದರು. ಮಹಿ ಜಿಗಿದ ಅಂತರ ಸುಮಾರು 2.27 ಮೀಟರ್‌ ಉದ್ದವಿತ್ತು ಎಂದು ಹೇಳಲಾಗಿದೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಯಿತು. ಅಲ್ಲದೇ 42ನೇ ವಯಸ್ಸಿನಲ್ಲೂ ಅದೆಂತಹ ಉತ್ಸಾಹ ಎಂದು ಅಭಿಮಾನಿಗಳು ಅಚ್ಚರಿಪಟ್ಟರು.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಬಿಬಿಎಂಪಿ ಚೀಫ್ ಎಂಜಿನಿಯರ್ ರಂಗನಾಥ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ರೇಡ್..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here