Download Our App

Follow us

Home » ರಾಜ್ಯ » ಬೆಳ್ಳಂಬೆಳಗ್ಗೆ ಬಿಬಿಎಂಪಿ ಚೀಫ್ ಎಂಜಿನಿಯರ್ ರಂಗನಾಥ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ರೇಡ್..!

ಬೆಳ್ಳಂಬೆಳಗ್ಗೆ ಬಿಬಿಎಂಪಿ ಚೀಫ್ ಎಂಜಿನಿಯರ್ ರಂಗನಾಥ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ರೇಡ್..!

ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯದ 60 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಯಲಹಂಕ ಝೋನ್ ಬಿಬಿಎಂಪಿ ಮುಖ್ಯ ಎಂಜಿನಿಯರ್‌ S.P ರಂಗನಾಥ್‌ಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿ 25 ಪಿಐ ಸೇರಿದಂತೆ 130 ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮುಂದುವರೆಸಿದ್ದಾರೆ. 

ಲೋಕಾ ಬೆಳ್ಳಂಬೆಳಗ್ಗೆ ಭ್ರಷ್ಟರ ನಿದ್ದೆಗೆಡಿಸಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಮೇಲೆ ಹಾಗೂ ಅವರಿಗೆ ಸೇರಿದ ಸ್ಥಳಗಳಲ್ಲಿ ಮೇಲೆ ಏಕಕಾಲಕ್ಕೆ ರೇಡ್​ ಮಾಡಲಾಗಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ರೇಡ್ ಮಾಡಲಾಗಿದ್ದು,​ ಬೆಂಗಳೂರು, ಉಡುಪಿ, ಕಾರವಾರ, ಮೈಸೂರು, ಕೊಡಗು, ಬೀದರ್, ಕೋಲಾರ, ವಿಜಯಪುರ, ಚಿಕ್ಕಬಳ್ಳಾಪುರ, ಮಂಡ್ಯ, ಬೆಳಗಾವಿಯಲ್ಲಿ ಲೋಕಾ ಅಧಿಕಾರಿಗಳು ರೇಡ್​ ನಡೆಸಿದ್ದಾರೆ.

BBMP ಚೀಫ್ ಇಂಜಿನಿಯರ್ ರಂಗನಾಥ್​ ಅವರ ಬ್ಯಾಟರಾಯನಪುರ, ಯಲಹಂಕ ಬಿಬಿಎಂಪಿ ಕಚೇರಿ ಮೇಲೆ ಲೋಕಾ ದಾಳಿ​ ಮಾಡಿದ್ದು, ಯಲಹಂಕದ ಮನೆ ಹಾಗು ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಳಿ ನಡೆಸಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ರೇಡ್​ ವೇಳೆ ಹಲವು ಮಹತ್ವದ ದಾಖಲೆಯನ್ನು ಲೋಕಾ ಅಧಿಕಾರಿಗಳು  ವಶಕ್ಕೆ ಪಡೆದಿದ್ದಾರೆ. 20 ಕ್ಕೂ ಹೆಚ್ಚು ಅಧಿಕಾರಿಗಳು ಚೀಫ್ ಇಂಜಿನಿಯರ್ ರಂಗನಾಥ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಸದಾಶಿವನಗರದ ಮನೆಗೆ 5 ಅಧಿಕಾರಿಗಳ ತಂಡ ರೇಡ್ ನಡೆಸಿದ್ದಾರೆ. ಬೆಳಗ್ಗೆ 7 ಗಂಟೆಗೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, ಸತತ ಎರಡು ಗಂಟೆಗಳಿಂದ ಕಾರ್ಯಾಚರಣೆ ಮುಂದುವರಿಸಿದ್ದಾರೆ. 

ರಾಜ್ಯಾದ್ಯಂತ ಭ್ರಷ್ಟರಿಗೆ ಲೋಕಾ ಶಾಕ್​​​..! ಯಾರ್ಯಾರ ಮೇಲೆ ನಡೆದಿದೆ ಗೊತ್ತಾ ರೇಡ್​..?

1. ರಂಗನಾಥ್​- ಬಿಬಿಎಂಪಿ ಚೀಫ್​ ಎಂಜಿನಿಯರ್​​, ಯಲಹಂಕ ಝೋನ್​​
2. ರೂಪಾ- ಉಡುಪಿ ಅಬಕಾರಿ ಡಿಸಿ
3. ಪ್ರಕಾಶ್​- ಕಾರವಾರ ಜ್ಯೂನಿಯರ್​ ಎಂಜಿನಿಯರ್​​
4. ಫಯಾಜ್​ ಅಹ್ಮದ್​- ಅಸಿಸ್ಟೆಂಟ್​ ಎಂಜಿನಿಯರ್​​, ಮೈಸೂರು
5. ಜಯಣ್ಣ- ಚೀಫ್​​ ಎಕ್ಸ್​ಕ್ಯೂಟಿವ್​ ಆಫೀಸರ್​​​​​​ ಕೊಡಗು
6. ಯತೀಶ್​- ರಾಮನಗರ ಜಿಲ್ಲೆ ಬಿಡದಿಯ ಮಾಚನಾಯನಕನಹಳ್ಳಿ PDO
7. ಮಹೇಶ್​ ಚಂದ್ರಯ್ಯ ಹಿರೇಮಠ್​, RFO, ಧಾರವಾಡ-
8. ಶಿವಕುಮಾರಸ್ವಾಮಿ- ಎಕ್ಸ್​ಕ್ಯೂಟಿವ್​ ಎಂಜಿನಿಯರ್​​, ಬೀದರ್​​
9. ನಾಗರಾಜಪ್ಪ, ಅಸಿಸ್ಟೆಂಟ್​ ಡೈರೆಕ್ಟರ್​​, ಕೋಲಾರ
10. ಷಣ್ಮುಖಪ್ಪ- ಬಾಗಲಕೋಟೆ ಜಿಲ್ಲೆ ಜಮಖಂಡಿ ARTO
11. ಸದಾಶಿವಯ್ಯ- ಅಸಿಸ್ಟೆಂಟ್​ ಎಕ್ಸ್​ಕ್ಯೂಟಿವ್​​ ಎಂಜಿನಿಯರ್​​​
12. ಕೃಷ್ಣೇಗೌಡ- ಸೆಕೆಂಡ್​ ಡಿವಿಷನ್​ ಅಕೌಂಟ್​ ಅಸಿಸ್ಟೆಂಟ್​, ಮಂಡ್ಯ
13. ಸದಾಶಿವ ಜಯಪ್ಪ- ಬೆಳಗಾವಿ ನಿಡಗುಂಡಿ PDO

ಇದನ್ನೂ ಓದಿ : ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ACP ಜೀಪ್ ಡ್ರೈವರ್ ಹಾಗೂ ಹೆಡ್​ ಕಾನ್ಸ್‌ಟೇಬಲ್..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here