ಮಂಡ್ಯ : ನಾನು ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡಲ್ಲ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ. ಮಂಡ್ಯದ ಕೆರಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ನಾನು ಭಾಗವಹಿಸಲ್ಲ ಎಂದಿದ್ದಾರೆ.
ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಸದ್ಯಕ್ಕೆ ಯಾವುದೇ ಐಡಿಯಾ ನನ್ನಲಿಲ್ಲ. ನನ್ನದು ಸಿನಿಮಾ, ಸಿನಿಮಾ ನನ್ನ ಬದುಕು ಅಷ್ಟೇ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಲನಚಿತ್ರೋತ್ಸವದ ಹಿನ್ನಲೆಯಲ್ಲಿ ಭೇಟಿ ಮಾಡಿದ್ದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಯಾರೆಲ್ಲ ಸ್ಪರ್ಧೆ ಮಾಡ್ತಿದ್ದಾರೆ ಅವರಿಗೆಲ್ಲ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ. ಅಧಿಕಾರಕ್ಕೆ ಬರುವವರು ಒಳ್ಳೆಯ ಆಡಳಿತ ಕೊಡಿ, ವಿರೋಧ ಪಕ್ಷಕ್ಕೆ ಯಾರು ಬರ್ತಾರೆ ಅವರು ಕೂಡ ಒಳ್ಳೆಯ ಕೆಲಸ ಮಾಡಲಿ. ಈ ಸಮಾಜದಲ್ಲಿ ಎರಡೂ ಇಂಪಾರ್ಟೆಂಟ್ ಒಳ್ಳೆಯದಾಗಲಿ. ಚುನಾವಣೆ ಪ್ರಚಾರ ಮಾಡಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : “ಕಲ್ಕಿ 2898AD” ಸಿನಿಮಾದಲ್ಲಿ ಭೈರವನಾದ ಪ್ರಭಾಸ್, ಹೊಸ ಲುಕ್ ರಿಲೀಸ್..!