Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಶಂಕಿತ ಆರೋಪಿಯ​ ನಾಲ್ಕು ಪೋಟೋ ರಿಲೀಸ್​ ಮಾಡಿದ NIA..!

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಶಂಕಿತ ಆರೋಪಿಯ​ ನಾಲ್ಕು ಪೋಟೋ ರಿಲೀಸ್​ ಮಾಡಿದ NIA..!

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಈಗಾಗಲೇ ಎನ್‌ಐಎ ಘೋಷಿಸಿತ್ತು. ಇದೀಗ ಶಂಕಿತ ಆರೋಪಿಯ ಪತ್ತೆಗೆ ನೆರವಾಗಲೆಂದು ಬಾಂಬರ್​ನ ಓಡಾಟದ ನಾಲ್ಕು ಫೋಟೋವನ್ನು ಎನ್​ಐಎ ರಿಲೀಸ್​ ಮಾಡಿದ್ದು, ಆರೋಪಿ ಬಿಎಂಟಿಸಿ ಬಸ್​ ನಿಲ್ದಾಣವೊಂದರಲ್ಲಿ ಓಡಾಡಿರುವ ಫೋಟೋವನ್ನು ಬಿಡುಗಡೆ ಮಾಡಿದೆ.

ಸಾರ್ವಜನಿಕರಿಗೆ ಪೋಟೋದಲ್ಲಿರುವ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದ್ರೆ ಮಾಹಿತಿ ನೀಡುವಂತೆ ಎನ್‌ಐಎ ಮನವಿ ಮಾಡಿದ್ದು, ಪೋನ್ ನಂಬರ್ ಮತ್ತು ಇಮೇಲ್ ಐಡಿ ಕೊಟ್ಟು (08029510900, 8904241100 ಇಮೇಲ್ info.blr.nia@gov.in) ಮಾಹಿತಿ ನೀಡುವಂತೆ ಮನವಿ ಮಾಡಿದೆ. ಎನ್ ಐಎ ಅಧಿಕಾರಿಗಳು ನಿನ್ನೆಯಷ್ಟೇ ಶಂಕಿತ ಆರೋಪಿಯ ಎರಡು ವಿಡಿಯೋವನ್ನು ರಿಲೀಸ್ ಮಾಡಿದ್ದರು.

ಇನ್ನು ಗುರುವಾರ ಬೆಂಗಳೂರಿನ ರಾಮೇಶ್ವರಂ ಕೆಫೆ  ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತನ ಮಹತ್ವದ ಸುಳಿವು ಪತ್ತೆಯಾಗಿತ್ತು. ಶಂಕಿತ ತುಮಕೂರು ಮೂಲಕ ಬಳ್ಳಾರಿಗೆ ತೆರಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಲ್ಲಿಂದ ಬೀದರ್​​ನತ್ತ ಹೊರಟಿರುವುದಾಗಿ ಮಾಹಿತಿ ದೊರೆತಿತ್ತು. ಅದರಂತೆ ಇದೀಗ ಬಾಂಬರ್ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಮಾರ್ಚ 1 ನೇ ತಾರೀಖು ರಾತ್ರಿ ಒಂಬತ್ತು ಗಂಟೆಗೆ ಬಸ್ ನಿಲ್ದಾಣದಲ್ಲಿ ಓಡಾಡಿರುವ ಬಾಂಬರ್, ಮುಖಕ್ಕೆ ಮಾಸ್ಕ್ ಹಾಕಿ, ಲೈಟ್ ಬ್ಲೂ ಕಲರ್ ಟಿ ಶರ್ಟ, ಬ್ಲಾಕ್ ಪ್ಯಾಂಟ್ ಹಾಕಿಕೊಂಡು ಓಡಾಡಿದ್ದಾನೆ.

ಇದನ್ನೂ ಓದಿ : ನಾನು ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡಲ್ಲ, ಸಿನಿಮಾ ಮಾತ್ರ ನನ್ನ ಬದುಕು – ನಟ ಡಾಲಿ ಧನಂಜಯ್..!

Leave a Comment

RELATED LATEST NEWS

Top Headlines

ನಟ ದುನಿಯಾ ವಿಜಯ್ ವಿಚ್ಛೇದನ ಕೋರಿದ ಅರ್ಜಿ ವಜಾ..!

ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ 2018ರಲ್ಲಿ ವಿಚ್ಛೇದನ ವಿಚಾರವಾಗಿ ಕೋರ್ಟ್‌ ಮೆಟ್ಟಿಲು ಏರಿದ್ದರು. ಪತ್ನಿ ನಾಗರತ್ನರಿಂದ ಡಿವೋರ್ಸ್‌ ಬೇಕೇ ಬೇಕು ಎಂದು ದುನಿಯಾ ವಿಜಯ್

Live Cricket

Add Your Heading Text Here