ದೇವನಹಳ್ಳಿ : ಚುನಾವಣಾ ಅಕ್ರಮಗಳ ತಡೆಗೆ ಸಿ-ವಿಜಿಲ್ ಆ್ಯಪ್ನ್ನು ಚುನಾವಣಾ ಆಯೋಗ ಜಾರಿಗೆ ತಂದಿದೆ. ಕೇಂದ್ರ ಚುನಾವಣಾ ಆಯೋಗ ಜನರನ್ನು ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೂಪಿಸಿರುವ ಆ್ಯಪ್ ಇದಾಗಿದೆ. ಸಿ-ವಿಜಿಲ್ ಆ್ಯಪ್ ಮೂಲಕ ಇದುವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 38 ದೂರು ಸ್ವೀಕೃತಿ ಆಗಿವೆ.
ಸಿ-ವಿಜಿಲ್ ಆ್ಯಪ್ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ಅಕ್ರಮಗಳಿಗೆ ತಡೆ ಹಾಕಲು ಸಹಕಾರಿಯಾಗಿದೆ. ಸಿ- ವಿಜಿಲ್ ಆ್ಯಪ್ ಚುನಾವಣೆಗೆ ಸಂಬಂಧಿಸಿ ಸಾರ್ವಜನಿಕ ದೂರು ಸ್ವೀಕೃತಿಗಾಗಿ ರೂಪುಗೊಂಡಿದೆ. ಈ ಆ್ಯಪ್ ಮೂಲಕ ಯಾರು ಬೇಕಾದರೂ ಚುನಾವಣಾಧಿಕಾರಿಗೆ ದೂರು ಸಲ್ಲಿಸಬಹುದು. ಆಂಡ್ರಾಯ್ಡ್ ಮೊಬೈಲ್ನ ಪ್ಲೇಸ್ಟೋರ್ನಲ್ಲಿ ಸಿವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಚುನಾವಣಾ ಅಕ್ರಮ ಕಂಡುಬಂದರೆ ಆ್ಯಪ್ ಮೂಲಕ ಲೊಕೇಷನ್ ಆನ್ ಮಾಡಿ, ಸಾರ್ವಜನಿಕರೆ ದೂರು ನೀಡಬಹುದು. ಜನರನ್ನು ಸಹ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಿ-ವಿಜಿಲ್ ಆ್ಯಪ್ ಅನುಕೂಲವಾಗಿದೆ.
ಇದನ್ನೂ ಓದಿ : ಫ್ರೀ ಬಸ್ ಎಫೆಕ್ಟ್ : ಒಂದೇ ವರ್ಷದಲ್ಲಿ ಮುಜರಾಯಿ ದೇಗುಲಗಳಿಗೆ 1000 ಕೋಟಿ ಆದಾಯ..!