ಬೆಂಗಳೂರು : ಫ್ರೀ ಬಸ್ ಎಫೆಕ್ಟ್ನಿಂದಾಗಿ ದೇಗುಲದ ಹುಂಡಿ ಇನ್ನೂ ತುಂಬುತ್ತಲೇ ಇವೆ. ಫ್ರೀ ಬಸ್ ಗ್ಯಾರಂಟಿ ಯೋಜನೆಯು ದೇವಾಲಯಗಳಿಗೆ ಭರ್ಜರಿ ಶಕ್ತಿ ತಂದುಕೊಟ್ಟಿದೆ. ಕುಕ್ಕೆ, ಕೊಲ್ಲೂರು ಸೇರಿ ದೇವಸ್ಥಾನಗಳಿಗೆ ಭಕ್ತರ ಹೊಳೆ ಹರಿದು ಬಂದಿದೆ.
ಒಂದೇ ವರ್ಷದಲ್ಲಿ ಮುಜರಾಯಿ ದೇಗುಲಗಳಿಗೆ 1000 ಕೋಟಿ ಆದಾಯ ಬಂದಿದೆ. ರಾಜ್ಯದಲ್ಲಿರುವ 34, 563 ಮುಜರಾಯಿ ದೇಗುಲಗಳ ಆದಾಯ ಹೆಚ್ಚಳವಾಗಿದ್ದು, 2023-24ರಲ್ಲಿ 10 ಪ್ರತಿಷ್ಠಿತ ದೇಗುಲಗಳಿಗೆ 412 ಕೋಟಿ ಆದಾಯ ಬಂದಿದೆ. 2022-23ರಲ್ಲಿ 10 ಪ್ರತಿಷ್ಠಿತ ದೇಗುಲಗಳಿಗೆ 372 ಕೋಟಿ ಆದಾಯ ಬಂದಿತ್ತು, ಕುಕ್ಕೆ ಸುಬ್ರಹ್ಮಣ್ಯಕ್ಕೆ 146 ಕೋಟಿ ಆದಾಯ, ಕೊಲ್ಲೂರು ದೇಗುಲಕ್ಕೆ 68 ಕೋಟಿ ಬಂದಿದೆ.
ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ 30.73 ಕೋಟಿ ಆದಾಯ ಸಂಗ್ರಹವಾಗಿದ್ದು, ಸವದತ್ತಿ ಯಲ್ಲಮ್ಮ ದೇಗುಲಕ್ಕೆ 25.80 ಕೋಟಿ, ಮಂದಾರ್ತಿಗೆ 15 ಕೋಟಿ ಬಂದಿದೆ. ಘಾಟಿ ಸುಬ್ರಹ್ಮಣ್ಯಕ್ಕೆ 13.65 ಕೋಟಿ, ಬೆಂಗಳೂರಿನ ಬನಶಂಕರಿಗೆ 11.37 ಕೋಟಿ ಸಂಗ್ರಹವಾಗಿದೆ.
ಇದನ್ನೂ ಓದಿ : ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್ಗೆ ಬಿಗ್ ಶಾಕ್ : ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ..!