Download Our App

Follow us

Home » ರಾಜಕೀಯ » ಪ್ರಾಸಿಕ್ಯೂಷನ್​ಗೆ ಕೊಟ್ಟಿರೋದ್ರ ಹಿಂದೆ ಬಿಜೆಪಿ, ಜೆಡಿಎಸ್​ ಕೈವಾಡ ಇದೆ – ಸಚಿವ ಡಾ.ಜಿ ಪರಮೇಶ್ವರ್..!

ಪ್ರಾಸಿಕ್ಯೂಷನ್​ಗೆ ಕೊಟ್ಟಿರೋದ್ರ ಹಿಂದೆ ಬಿಜೆಪಿ, ಜೆಡಿಎಸ್​ ಕೈವಾಡ ಇದೆ – ಸಚಿವ ಡಾ.ಜಿ ಪರಮೇಶ್ವರ್..!

ಬೆಂಗಳೂರು : ಪ್ರಾಸಿಕ್ಯೂಷನ್​ಗೆ ಕೊಟ್ಟಿರೋದ್ರ ಹಿಂದೆ ರಾಜಕೀಯ ಇದೆ, ಇದಕ್ಕೆ ನಾವು ರಾಜಕೀಯವಾಗಿಯೇ ಉತ್ತರ ಕೊಡ್ಬೇಕು. ನಮ್ಮ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲು ಸೂಚಿಸಿದ್ದೇವೆ, ಶಾಂತಿಯುತವಾಗಿ ಹೋರಾಟ ಮಾಡಲು ಮನವಿ ಮಾಡಿದ್ದೇವೆ ಎಂದು ಸಚಿವ ಡಾ.ಜಿ.ಪರಮೇಶ್ವರ್​​​​​ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​​​​​ ಮಾತನಾಡಿ, ಬಿಜೆಪಿ, ಜೆಡಿಎಸ್​ನ ಕೈವಾಡ ಇದರ ಹಿಂದೆ ಇದೆ, ಕಾನೂನು ಮತ್ತು ರಾಜಕೀಯವಾಗಿ ಎಲ್ಲವನ್ನೂ ಎದುರಿಸಬೇಕು. ರಾಜ್ಯದಲ್ಲಿ ಪ್ರತಿಭಟನೆ ಮಾಡುವ ಮೂಲಕ ಮನವರಿಕೆ ಮಾಡ್ಬೇಕು, ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ತಪ್ಪು ಇಲ್ಲವೇ ಇಲ್ಲ. ಆದರೂ ತನಿಖೆಗೆ ಅನುಮತಿ ನೀಡಿರೋದು ಸರಿಯಲ್ಲ ಎಂದಿದ್ದಾರೆ.

ಕಾನೂನು ಹೋರಾಟದಲ್ಲಿ ನಮಗೆ ಗೆಲುವು ಸಿಗುತ್ತೆ, ಸಿಎಂ ವಿರುದ್ಧ ತನಿಖೆ ಮಾಡಲು ಆಧಾರಗಳೇ ಇಲ್ಲ. ರಾಜ್ಯಪಾಲರು ನಿಯಮ ಮೀರಿ ತೀರ್ಮಾನ ಮಾಡಿದ್ದಾರೆ, ಕೋರ್ಟ್​ನಲ್ಲೂ ಇದು ನಿಲ್ಲೋದಿಲ್ಲ ಅನ್ನೋ ವಿಶ್ವಾಸ ಇದೆ. ದೂರುದಾರರು ಲೋಕಾಯುಕ್ತ ತನಿಖೆಗೆ ಕೋರಿದ್ದಾರೆ, ಲೋಕಾಯುಕ್ತ ತನಿಖೆಗೆ ಕೊಟ್ಟರೆ ಕೊಡಬಹುದು. ಪ್ರಾಸಿಕ್ಯೂಷನ್​ ಗೈಡ್​ಲೈನ್​​ಗಳನ್ನೇ ಇಲ್ಲಿ ಮೀರಲಾಗಿದೆ, ಸಂಪುಟದ ನಿರ್ಣಯವನ್ನೇ ರಾಜ್ಯಪಾಲರು ಬದಿಗೊತ್ತಿದ್ದಾರೆ. ನಮ್ಮ ನಿರ್ಣಯದಲ್ಲಿ ಸ್ಪಷ್ಟವಾಗಿ ಹಳೆಯ ಪ್ರಕರಣ ಉಲ್ಲೇಖಿಸಿದ್ದೇವೆ, ಉದ್ದೇಶಪೂರ್ವಕವಾಗಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ. ದ್ವೇಷದ ರಾಜಕಾರಣ ಬೇಡ ಅಂತಾ ಮನವಿ ಮಾಡಿದ್ದೆವು, ವಿಪಕ್ಷಕ್ಕೊಂದು, ನಮಗೊಂದು ನ್ಯಾಯ ಎನ್ನುವಂತಾಗಿದೆ ಎಂದು ಡಾ.ಜಿ.ಪರಮೇಶ್ವರ್​ ಹೇಳಿದ್ದಾರೆ.

ಹಾಗೆಯೇ ಸಿಎಂ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲವೇ ಇಲ್ಲ, ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತೇವೆ. ಕೇರಳ, ತಮಿಳುನಾಡಿನಲ್ಲಿ ಇದೇ ರೀತಿ ‌ಮಾಡಿದ್ದಾರೆ, ಕರ್ನಾಟಕ ಸಿಎಂ ಮೇಲೆ ಈಗ ದ್ವೇಷ ತೀರಿಸಿಕೊಳ್ತಿದ್ದಾರೆ. ರಾಜ್ಯಪಾಲರ ಕಚೇರಿ ದುರುಪಯೋಗ ಆಗಿದೆ, ಹೈಕಮಾಂಡ್​ ಸೂಕ್ತವಾದ ತೀರ್ಮಾನ ಮಾಡುತ್ತಾರೆ, ಅಭಿಷೇಕ್​ ಮನು ಸಿಂಘ್ವಿ ಅವರೇ ವಾದ ಮಾಡಬಹುದು ಎಂದಿದ್ದಾರೆ.

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಕೀಚಕ ಕೃತ್ಯ – ಆಟೋದಲ್ಲೇ ನಡೀತಾ ಯುವತಿಯ ಗ್ಯಾಂಗ್ ರೇಪ್?

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here

14:14