ಬೆಂಗಳೂರು : ಗೋವಿಂದರಾಜನಗರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಮಾಜಿ ಸಚಿವ ಸೋಮಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಮಧ್ಯೆ ಭಾರಿ ಜಟಾಪಟಿ ಶುರುವಾಗಿದೆ.
ಗೋವಿಂದರಾಜ ನಗರವನ್ನು ಪ್ರತಿನಿಧಿಸುತ್ತಿದ್ದ ಸೋಮಣ್ಣ ಕಳೆದ ಬಾರಿ ವರುಣಕ್ಕೆ ಶಿಫ್ಟ್ ಆಗಿದ್ದರು. ಆಗ ಗೋವಿಂದರಾಜ ನಗರದಿಂದ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಸ್ಪರ್ಧಿಸಿದ್ದರು. ಕೇವಲ 12,500 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಆದರೆ ವರುಣ ಮತ್ತು ಚಾಮರಾಜನಗರ ಎರಡು ಕ್ಷೇತ್ರದಲ್ಲಿ ಸೋತ ವಿ.ಸೋಮಣ್ಣ ಈಗ ಮತ್ತೆ ಗೋವಿಂದ ನಗರಕ್ಕೆ ಮರಳಿದ್ದಾರೆ.
ಇದು ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಲು ಹೊರಟಿರುವ ಸೋಮಣ್ಣ ತಮ್ಮ ಬೆಂಬಲಿಗರ ಮೂಲಕ ಉಮೇಶ್ ಶೆಟ್ಟಿ ವಿರುದ್ಧ ರಾಜ್ಯ ಘಟಕಕ್ಕೆ ದೂರು ನೀಡಿದ್ದಾರೆ. ಉಮೇಶ್ ಶೆಟ್ಟಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅತ್ತ ಉಮೇಶ್ ಶೆಟ್ಟಿ ಕೂಡ ಸೋಮಣ್ಣ ಅವರು ಇಲ್ಲದಿದ್ದಾಗ ಕ್ಷೇತ್ರವನ್ನು ಭದ್ರಪಡಿಸಿದ್ದೆ ನಾನು. ಈಗ ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿ ಸೋಮಣ್ಣ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ದೂರನ್ನು ನೀಡಿದ್ದಾರೆ. ಗೋವಿಂದರಾಜ ನಗರದ ಇಬ್ಬರು ಪ್ರಮುಖ ನಾಯಕರು ಪರಸ್ಪರ ದೂರು ಪ್ರತಿ ದೂರು ನೀಡಿದ್ದಾರೆ.
ಇದನ್ನೂ ಓದಿ : ಮೈ ಮುಟ್ಟುತ್ತಾನೆ, ಎದೆ ಮೇಲಿನ ಬಟ್ಟೆ ಎಳೆಯುತ್ತಾನೆ ಕಿಮ್ಸ್ ಮಹಿಳಾ ಡಾಕ್ಟರ್ ದೂರು..!