ಬೆಂಗಳೂರು : ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯೊಬ್ಬರಿಗೆ ಜೂನಿಯರ್ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಜೂನಿಯರ್ ವೈದ್ಯ ಡಾ.ರಾಜು ಎಂಬಾತ ಫಾಲೋ ಮಾಡ್ತಾನೆ, ಮೈ ಕೈ ಮುಟ್ತಾನೆ, ಎದೆ ಮೇಲಿನ ಬಟ್ಟೆ ಎಳೆಯುತ್ತಾನೆ ಎಂದು ಮಹಿಳಾ ಡಾಕ್ಟರ್ ದೂರು ನೀಡಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಮ್ಸ್ ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ವೈದ್ಯೆಗೆ ಅದೇ ವಿಭಾಗದಲ್ಲಿ ಕೆಲಸ ಮಾಡ್ತಿರುವ ಡಾ. ರಾಜು ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕಾಲೇಜಿನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಬರ್ತಿದ್ದಾನೆ, ನನ್ನನ್ನ ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡ್ತಾನೆ ಅಂತಾ ಆರೋಪಿಸಿ ವೈದ್ಯೆ ಡಾ. ರಾಜು ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ; ಚಿಕ್ಕಮಗಳೂರಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಅಡ್ಡಿ : ಕಿಡಿಗೇಡಿಗಳಿಂದ ಭಾಷಣ ವಿರೋಧಿಸಿ ಬ್ಯಾನರ್..!