Download Our App

Follow us

Home » ರಾಜಕೀಯ » ಲೋಕಸಭೆ ಚುನಾವಣೆ : ನಾಳೆಯೇ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್​ ಘೋಷಣೆ..?

ಲೋಕಸಭೆ ಚುನಾವಣೆ : ನಾಳೆಯೇ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್​ ಘೋಷಣೆ..?

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ​ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಇಂದು ಫೈನಲ್​ ಆಗಿ ನಾಳೆಯೇ ಲಿಸ್ಟ್​ ಘೋಷಣೆಯಾಗುವ ಸಾಧ್ಯತೆಯಿದೆ. ನಿನ್ನೆ ಒಂದೊಂದು ಕ್ಷೇತ್ರಕ್ಕೆ ಎರಡು ಹೆಸರು ಫೈನಲ್​​​ ಆಗಿದ್ದು, ಇಂದು ನಾಯಕರು ಒಂದು ಹೆಸರು ಫೈನಲ್​ ಮಾಡಲಿದ್ದಾರೆ.

ನಂತರ ಪ್ರಧಾನಿ ಮೋದಿಯವರ ಗಮನಕ್ಕೆ ತಂದು ನಾಳೆ ಪಟ್ಟಿ ಅನೌನ್ಸ್​ ಮಾಡುವ ಸಾಧ್ಯತೆಯಿದೆ. ನಿನ್ನೆ ಸಂಜೆಯಿಂದ ಬಿಜೆಪಿ ನಾಯಕರು ಮ್ಯಾರಥಾನ್ ಮೀಟಿಂಗ್​​​ ನಡೆಸಿದ್ದಾರೆ. ಈ ಸಭೆ ಅಮಿತ್​​​ ಶಾ, ಜೆ.ಪಿ.ನಡ್ಡಾ, ಬಿ.ಎಲ್​​.ಸಂತೋಷ್​ ಸಮ್ಮುಖದಲ್ಲಿ ನಡೆದಿದೆ.

ಸಭೆಗೆ ಮಾಜಿ ಸಿಎಂ ಬಿ.ಎಸ್​.ವೈ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜಬೊಮ್ಮಾಯಿ, ಆರ್​​.ಅಶೋಕ್​​, ಕೋಟಾ ಶ್ರೀನಿವಾಸ ಪೂಜಾರಿ, ಪ್ರಹ್ಲಾದ್​ ಜೋಶಿ ಮತ್ತಿತರರು ಸಾಥ್​​​ ನೀಡಿದ್ದಾರೆ. ನಿನ್ನೆ ಕೋರ್​​ ಕಮಿಟಿ ಸಭೆ ನಡೆಸಿರುವ ಬಿಜೆಪಿ ನಾಯಕರು ನಾಳೆ ಮೋದಿ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಸಲಿದ್ದಾರೆ.

ಸರ್ವೆ, ಸ್ಥಳೀಯ ನಾಯಕರ ಅಭಿಪ್ರಾಯ ಎರಡನ್ನೂ ಸಂಗ್ರಹಿಸಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಈ ಕೆಳಗಿನ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಸಾಧ್ಯತೆಯಿದೆ.

ಟಿಕೆಟ್ ಪಡೆಯೋ ಹಾಲಿ ಸಂಸದರು? :

  • ನಳೀನ್​ ಕುಮಾರ್​ ಕಟೀಲ್​​- ಮಂಗಳೂರು- 3 ಬಾರಿ ಸಂಸದ
  • ತೇಜಸ್ವಿ ಸೂರ್ಯ- ಬೆಂಗಳೂರು ದಕ್ಷಿಣ- ಮೊದಲ ಬಾರಿ ಸಂಸದ
  • ಪಿ.ಸಿ.ಮೋಹನ್​​- ಬೆಂಗಳೂರು ಸೆಂಟ್ರಲ್​- 3 ಬಾರಿ ಸಂಸದ
  • ನಾರಾಯಣಸ್ವಾಮಿ- ಚಿತ್ರದುರ್ಗ- ಮೊದಲ ಬಾರಿ ಸಂಸದ
  • ಶೋಭಾ ಕರಂದ್ಲಾಜೆ- ಉಡುಪಿ-ಚಿಕ್ಕಮಗಳೂರು, ಎರಡು ಬಾರಿ ಸಂಸದೆ
  • ಪ್ರತಾಪ್​ ಸಿಂಹ- ಮೈಸೂರು- ಎರಡು ಬಾರಿ ಸಂಸದ
  • ಬಿ.ವೈ.ರಾಘವೇಂದ್ರ- ಶಿವಮೊಗ್ಗ- ಮೂರು ಬಾರಿ ಸಂಸದ
  • ಮುನಿಸ್ವಾಮಿ- ಕೋಲಾರ, ಮೊದಲ ಬಾರಿ ಸಂಸದ
  • ಜಿ.ಎಂ.ಸಿದ್ದೇಶ್ವರ್​​- ದಾವಣಗೆರೆ, ನಾಲ್ಕು ಬಾರಿ ಸಂಸದ
  • ಪ್ರಹ್ಲಾದ್ ಜೋಶಿ-ಹುಬ್ಬಳ್ಳಿ-ಧಾರವಾಡ, ಮೂರು ಬಾರಿ ಸಂಸದಹೊಸದಾಗಿ ಯಾರಿಗೆ ಟಿಕೆಟ್​..?
  • ಜಗದೀಶ್​ ಶೆಟ್ಟರ್​-ಬೆಳಗಾವಿ
  • ಬಸವರಾಜ ಬೊಮ್ಮಾಯಿ-ಹಾವೇರಿ
  • ಹರಿಪ್ರಕಾಶ್​ ಕೋಣೆಮನೆ- ಉತ್ತರ ಕನ್ನಡ

ಇದನ್ನೂ ಓದಿ : ಸಮಯ ಪ್ರಜ್ಞೆ ಮೆರೆದ ಟ್ರಾಫಿಕ್​​ ಪೊಲೀಸ್ : ಸಂಪ್​ಗೆ ಬಿದ್ದ 2 ವರ್ಷದ ಮಗುವಿನ ಪಾಲಿಗೆ ರಕ್ಷಕರಾದ PSI..!

Leave a Comment

DG Ad

RELATED LATEST NEWS

Top Headlines

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಬಿಗ್​ ರಿಲೀಫ್ ​​​- ಸುಪ್ರೀಂ ಕೋರ್ಟ್​ನಿಂದ ಬೇಲ್​ ಮಂಜೂರು..!

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಶುಕ್ರವಾರ ಅವರಿಗೆ ಬೇಲ್‌ ಮಂಜೂರು ಮಾಡಿದೆ. ಇದರಿಂದ

Live Cricket

Add Your Heading Text Here