ಬೆಂಗಳೂರು : ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರ ರಾಷ್ಟ್ರ ಮಟ್ಟದಲ್ಲಿ ವಿವಾದಕ್ಕೀಡಾಗಿದೆ. ಇದೀಗ ಈ ವಿಚಾರವಾಗಿ ಸಂಸದ ಡಿ.ಕೆ ಸುರೇಶ್ ನಿವಾಸದ ಬಳಿ ಭಾರೀ ಹೈಡ್ರಾಮಾ ನಡೆದಿದೆ.
ಡಿ.ಕೆ ಸುರೇಶ್ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ ಸುರೇಶ್ ನಿವಾಸಕ್ಕೆ ನುಗ್ಗಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮನೆಯ ಗೇಟ್ ಎಗರಿ ಒಳಗೆ ನುಗ್ಗಿದ್ದು, ಪ್ರತ್ಯೇಕ ರಾಷ್ಟ್ರ ಹೇಳಿಕೆ ಕೊಟ್ಟಿದ್ದ ಡಿ.ಕೆ ಸುರೇಶ್ ವಿರುದ್ಧ ಈ ರೀತಿ ಕಿಡಿಕಾರಿದ್ದಾರೆ. ಸಂಸದ ಡಿ.ಕೆ ಸುರೇಶ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಪ್ರತಿಭಟನೆಗೆ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಅಧಿಕಾರ ಇದೆ, ನನ್ನ ಹೇಳಿಕೆಯನ್ನ ಬಿಜೆಪಿಯವ್ರು ತಿರುಚುವ ಕೆಲಸ ಮಾಡ್ತಿದಾರೆ. ಬಿಜೆಪಿ ಅವ್ರು ಇದೇ ಹೋರಾಟ ಕೇಂದ್ರದ ವಿರುದ್ಧ ಮಾಡ್ಬೇಕಿತ್ತು, ಆಗಲಾದ್ರೂ ಇಷ್ಟೋತ್ತಿಗೆ ಅನುದಾನ ಸಿಗುತ್ತಿತ್ತು ಎಂದು ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : ಕಣ್ಣಿಗೆ ಖಾರದ ಪುಡಿ ಎರಚಿ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ..!