ಖ್ಯಾತ ಯೂಟ್ಯೂಬರ್ ಮತ್ತು ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 2ರ ವಿಜೇತರಾಗಿದ್ದ ಎಲ್ವಿಶ್ ಯಾದವ್ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಪಾರ್ಟಿಯಲ್ಲಿ ಮಾದಕ ವ್ಯಸನಕ್ಕಾಗಿ ಬಳಸಿದ 20 ಎಂಎಲ್ ಹಾವಿನ ವಿಷವನ್ನು ಪೊಲೀಸರು ಪತ್ತೆ ಮಾಡಿ, ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ವಿಶ್ ಯಾದವ್ರನ್ನು ತನಿಖೆಗೊಳಪಡಿಸಿ ಇದೀಗ ಬಂಧಿಸಿದ್ದಾರೆ.
ನವೆಂಬರ್ 3 ರಂದು, ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್‌ನಲ್ಲಿ 5 ಜನರನ್ನು ಬಂಧಿಸಿ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ವಶಕ್ಕೆ ಪಡೆದಿದ್ದರು. ಇದೀಗ ಈ ಪ್ರಕರಣದಲ್ಲಿ ಸೂರಜ್‌ಪುರದ ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಎಲ್ವಿಶ್ ಯಾದವ್ನನ್ನ ಒಪ್ಪಿಸಿದೆ.
ಇನ್ನು 26 ವರ್ಷದ ಎಲ್ವಿಶ್ ಯಾದವ್ ವಿರುದ್ಧ ವನ್ಯಜೀವಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 120ಎ ಅಡಿ ನಿಬಂಧನೆಗಳ ಆರೋಪ ಹೊರಿಸಲಾಗಿದೆ. ಈ ಹಿಂದೆಯೂ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಬಂಧಿಸಿರಲಿಲ್ಲ. ಆದರೀಗ ಪೊಲೀಸರು ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದಾರೆ. ಮಾರ್ಚ್ 9ರಂದು ಎಲ್ವಿಶ್ ಯಾದವ್ ಮತ್ತು ಆತನ ತಂಡ ದೆಹಲಿ ಮೂಲದ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ್ದರು. ಅಂಗಡಿಗೆ ತೆರಳಿ ಆತನಿಗೆ ಸರಿಯಾಗಿ ಏಟು ನೀಡಿ ಕೊಲೆ ಮಾಡುವುದುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಏನಿದು ಹಾವಿನ ಪ್ರಕರಣ? ಕಳೆದ ವರ್ಷ, ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸಂಘಟನೆಯು ಸಲ್ಲಿಸಿದ ದೂರಿನ ಆಧಾರದ ಮೇಲೆ, ನೋಯ್ಡಾ ಪೊಲೀಸರು ಸೆಕ್ಟರ್ 51 ರಲ್ಲಿರುವ ಬ್ಯಾಂಕ್ವೆಟ್ ಹಾಲ್ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದರು. ಪೀಪಲ್ ಫಾರ್ ಅನಿಮಲ್ಸ್ ಸಲ್ಲಿಸಿದ ದೂರಿನಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಹೆಸರು ಸಹ ಉಲ್ಲೇಖವಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಫ್ ಐಆರ್ ನಲ್ಲಿ ಎಲ್ವಿಶ್ ಹೆಸರು ದಾಖಲಿಸಿದ್ದರು. ಪೀಪಲ್ ಫಾರ್ ಅನಿಮಲ್ಸ್ ದೂರಿನಲ್ಲಿ ಎಲ್ವಿಶ್ ಯಾದವ್ ರೇವ್ ಪಾರ್ಟಿಗಳನ್ನು ಆಯೋಜಿಸಿ, ಅದಕ್ಕೆ ವಿದೇಶಿಯರನ್ನು ಆಹ್ವಾನಿಸಿ ವಿಷಪೂರಿತ ಹಾವುಗಳನ್ನು ಏರ್ಪಡಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ : ಕೋಲಾರ ಮೈತ್ರಿ ಟಿಕೆಟ್ ಜೆಡಿಎಸ್ ಪಾಲು : ಜೆಡಿಎಸ್ನಿಂದ ಮಲ್ಲೇಶ್ ಬಾಬುಗೆ ಟಿಕೆಟ್ ಬಹುತೇಕ ಫೈನಲ್..