‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭರ್ಜರಿಯಾಗಿ ನೆರವೇರಿದೆ. ಜಗತ್ತಿನ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಕನ್ನಡದ ಸೀಸನ್ 10ರ ವಿಜೇತರಾಗಿ ನಟ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಈ ವಿನ್ನರ್ ಪಟ್ಟಕ್ಕಾಗಿ ಸಾಕಷ್ಟು ಸ್ಪರ್ಧಿಗಳು ಹೋರಾಟ ನಡೆಸಿದ್ದರು. ಅದರಲ್ಲೂ ಸಂಗೀತಾ ಶೃಂಗೇರಿ, ವಿನಯ್ ಗೌಡ ಮತ್ತು ಡ್ರೋನ್ ಪ್ರತಾಪ್ ಅವರು ಬಿಗ್ಬಾಸ್ ಸೀಸನ್ ವಿನ್ನರ್ ಪಟ್ಟಕ್ಕಾಗಿ ಸಾಕಷ್ಟು ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ ಈ ಇಬ್ಬರಲ್ಲಿ ಬಿಗ್ಬಾಸ್ ವಿನ್ನರ್ ಪಟ್ಟಕ್ಕಾಗಿ ದೊಡ್ಡ ಫೈಟ್ ನಡೆದಿತ್ತು.
ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ‘ಹೀರೋ’ ಎಂದೇ ಖ್ಯಾತಿ ಪಡೆದಿದ್ದವರು ಕಾರ್ತಿಕ್ ಮಹೇಶ್. ಪರ್ಸನಾಲಿಟಿ ಶೋ ಆಗಿರುವ ‘ಬಿಗ್ ಬಾಸ್’ನಲ್ಲಿ ‘ಹೀರೋ’ ಕಾರ್ತಿಕ್ ಅವರಿಗೇ ಗೆಲುವಿನ ಕಿರೀಟ ಲಭಿಸಿದೆ. ‘ಬಿಗ್ ಬಾಸ್’ ಮನೆಯಲ್ಲಿ ಆಲ್‌ರೌಂಡರ್ ಆಗಿದ್ದವರು ಕಾರ್ತಿಕ್. ಟಾಸ್ಕ್, ಎಂಟರ್‌ಟೇನ್‌ಮೆಂಟ್ ಹಾಗೂ ಮನೆಯ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದವರು ಕಾರ್ತಿಕ್. ‘ಸಕಲಕಲಾವಲ್ಲಭ’ ಕಾರ್ತಿಕ್ ‘ಬಿಗ್ ಬಾಸ್’ ವಿನ್ನರ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.
ಕಾರ್ತಿಕ್ ಮಹೇಶ್ ಬಿಗ್ ಬಾಸ್ ಪಯಣ
ಬಿಬಿಕೆ 10 ಪ್ರೀಮಿಯರ್ ಸಂಚಿಕೆಯಲ್ಲಿ ಲೈವ್ ಆಡಿಯೆನ್ಸ್ ಕಡೆಯಿಂದ ಕಡಿಮೆ ವೋಟ್ಸ್ ಪಡೆದುಕೊಂಡು ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟವರು ಕಾರ್ತಿಕ್ ಮಹೇಶ್. ಮೊದಲ ವಾರವೇ ಟಾಸ್ಕ್‌ನಲ್ಲಿ ಹುಬ್ಬೇರಿಸುವ ಪರ್ಫಾಮೆನ್ಸ್ ಕೊಟ್ಟವರು ಕಾರ್ತಿಕ್ ಮಹೇಶ್. ಹೀಗಾಗಿ, ಕಾರ್ತಿಕ್ ಫಿಸಿಕಲಿ ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ‘ಬಿಗ್ ಬಾಸ್’ ಮನೆಯಲ್ಲಿ ಎಂಟರ್‌ಟೇನ್‌ಮೆಂಟ್ ವಿಷಯದಲ್ಲೂ ಕಾರ್ತಿಕ್ ಮುಂದಿದ್ದರು. ಹಾಡು, ಡ್ಯಾನ್ಸ್ ಹಾಗೂ ಸ್ಕಿಟ್‌ಗಳ ಮೂಲಕ ಕಾರ್ತಿಕ್ ವೀಕ್ಷಕರಿಗೆ ಮನರಂಜನೆ ಕೊಟ್ಟಿದ್ದಾರೆ.
‘ಬಿಗ್ ಬಾಸ್’ ವೇದಿಕೆಯನ್ನ ಕಾರ್ತಿಕ್ ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿ ಬಳಗವನ್ನ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಜರ್ನಿಯಲ್ಲಿ ಕಾರ್ತಿಕ್ ಕೆಲ ತಪ್ಪು ನಿರ್ಧಾರಗಳನ್ನೂ ತೆಗೆದುಕೊಂಡಿದ್ದಾರೆ. ಸರಿಯಾದ ನಿರ್ಧಾರಗಳನ್ನೂ ಮಾಡಿದ್ದಾರೆ. ತಮ್ಮ ತಪ್ಪುಗಳನ್ನೂ ಒಪ್ಪಿಕೊಂಡಿದ್ದಾರೆ. ತಿದ್ದಿಕೊಂಡು ಮುಂದೆ ಹೋಗುವ ಮನಸ್ಸೂ ಅವರಿಗೆ ಇದೆ.
ಹಾಗೆಯೇ ಕಾರ್ತಿಕ್ ಕೊನೆಗೂ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ನಿಜ ಜೀವನದ ಟ್ರೆಂಡ್‌ನಲ್ಲಿ ಕಾರ್ತಿಕ್ ಮುಂದೆ ಬಂದಿದ್ದಾರೆ. ಅಭಿಮಾನಿಗಳ ಕೃಪೆಯಿಂದ ಈ ಬಾರಿ ‘ಹೀರೋ’ ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ 10ರ ಪಟ್ಟವನ್ನು ತನ್ನ
ಮುಡಿಗೆರಿಸಿಕೊಂಡಿದ್ದಾರೆ. ತನ್ನ ತಾಯಿಗಾಗಿ ಒಂದು ಮನೆ ಕಟ್ಟಿಕೊಡಬೇಕು ಎಂಬ ಆಸೆಯನ್ನು ಕಾರ್ತಿಕ್ ಈ ಮೊದಲೇ ಹೇಳಿಕೊಂಡಿದ್ದರು. ಅಂತೆಯೇ ಈಗ 50 ಲಕ್ಷ ಗೆದ್ದಿದ್ದಾರೆ. ಮಾರುತಿ ಸುಜುಕಿ ಬ್ರೆಜಾ ಕಾರು ಕೂಡ ಸಿಕ್ಕಿದೆ. ಬೌನ್ಸ್ ಎಲಿಕ್ಟ್ರಿಕ್ ಸ್ಕೂಟರ್ ಅವರಿಗೆ ಗಿಫ್ಟ್ ಆಗಿ ಬಂದಿದೆ.
ಕರ್ನಾಟಕದಲ್ಲಿ ಮನರಂಜನಾ ಟ್ಯಾಕ್ಸ್ ಬರೋಬ್ಬರಿ ಶೇ. 31.2 ಪರ್ಸಂಟ್ ಇದೆ. ಅಂದರೆ, ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿಯಲ್ಲಿ 34.40 ಲಕ್ಷ ರೂಪಾಯಿ ಮಾತ್ರ ಹಣ ಸಿಗಲಿದೆ. ಉಳಿದ 14.60 ಲಕ್ಷ ರೂಪಾಯಿ ಸರ್ಕಾರಕ್ಕೆ ಸೇರಲಿದೆ. ನಾನಾ ರಾಜ್ಯಗಳಲ್ಲಿ ನಾನಾ ಸ್ಲ್ಯಾಬ್ ಇದೆ. ಬಿಹಾರದಲ್ಲಿ ಶೇ.50, ಉತ್ತರ ಪ್ರದೇಶದಲ್ಲಿ ಶೇ.60, ಮಹಾರಾಷ್ಟ್ರದಲ್ಲಿ ಶೇ. 45 ಟ್ಯಾಕ್ಸ್ ಇದೆ. ಆಯಾ ರಾಜ್ಯಗಳಿಗೆ ತಕ್ಕಂತೆ ನಿಯಮ ಬದಲಾಗುತ್ತದೆ. 10 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿರುವ ಅಮೌಂಟ್ಗೆ ಮಾತ್ರ ಇದು ಅಪ್ಲೈ ಆಗಲಿದೆ.
ಇದನ್ನೂ ಓದಿ : ಹೃದಯಾಘಾತದಿಂದ JDS ಮಾಜಿ ಶಾಸಕ ನಾಗನಗೌಡ ಕಂದಕೂರ್ ನಿಧನ..! – BTV Kannada