ಬೆಂಗಳೂರು : ತ್ರಿಬಲ್ ಮರ್ಡರ್ ಕೇಸ್ ಆರೋಪಿಗೆ ಬೆಂಗಳೂರು ಅಂತರಾಷ್ಟ್ರೀಯ ಏರ್ಪೋರ್ಟ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (BIAAPA) ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಸರ್ಕಾರವನ್ನು ರಾಜ್ಯ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ಉತ್ತರಿಸಲು ಹೈಕೋರ್ಟ್ ಸೂಚಿಸಿದೆ.
ತ್ರಿಬಲ್ ಮರ್ಡರ್ ಆರೋಪಿ ಶಾಂತಕುಮಾರ್ ಸುಳ್ಳು ಮಾಹಿತಿ ನೀಡಿ ‘ಬೈಯಪ’ ಅಧ್ಯಕ್ಷ ಸ್ಥಾನ ಪಡೆದಿದ್ದು, ಶಾಂತಕುಮಾರ್ ಮೇಲೆ ತ್ರಿಬಲ್ ಮರ್ಡರ್ ಕೇಸ್ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳಿವೆ. 2010ರಲ್ಲಿ ತ್ರಿಬಲ್ ಮರ್ಡರ್ ಕೇಸ್ ಶಾಂತಕುಮಾರ್ ಆರೋಪಿಯಾಗಿದ್ದ. ಶಾಂತಕುಮಾರ್ ವಿರುದ್ದ ವಿಶ್ವನಾಥಪುರ ಠಾಣೆಯಲ್ಲಿ 6ಕ್ಕೂ ಹೆಚ್ಚು ಪ್ರಕರಣಗಳು ಕೂಡ ದಾಖಲಾಗಿವೆ. ಅಲ್ಲದೆ, ಶಾಂತಕುಮಾರ್ಗೆ ತನ್ನದೇ ಆದ SMS ಬಿಲ್ಡರ್ಸ್ ಅನ್ನೊ ರಿಯಲ್ ಎಸ್ಟೇಟ್ ಕಂಪನಿ ಇದೆ. SMS ಬಿಲ್ಡರ್ಸ್, ಪಂಚಮಿ ಡೆವಲಪರ್ಸ್, ಪ್ರೆಸಿಡೆನ್ಸಿ ಡೆವಲಪರ್ಸ್, ಜ್ಞಾನ ಕುಟೀರ ಡೆವಲಪರ್ಸ್, ಶಿಕ್ಷಕರ ಬಡವಾಣೆಯ ನಿರ್ದೇಶಕರೂ ಆಗಿದ್ದಾರೆ.
ಇಷ್ಟೆಲ್ಲ ಇದ್ರೂ ಇದರ ಮಾಹಿತಿ ಪಡೆಯದೆ ಸರ್ಕಾರ ಶಾಂತಕುಮಾರ್ಗೆ ಬೈಯಪ ಅಧ್ಯಕ್ಷ ಸ್ಥಾನ ನೀಡಿದೆ. ಬೈಯಪ ಅಧ್ಯಕ್ಷರಾಗಿ ತನ್ನ ಕಂಪೆನಿಯ ಲ್ಯಾಂಡ್ಗಳನ್ನ ಸುಲಭವಾಗಿ ಕನ್ವರ್ಷನ್ ಮಾಡಬಹುದು. ಈಗಾಗಲೇ ಕನ್ವರ್ಷನ್ ಮಾಡಿ ಅಕ್ರಮವಾಗಿ ಹಣಗಳಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೂಡ ಶಾಂತಕುಮಾರ್ ಮೇಲೆ ಕೇಳಿಬಂದಿದೆ.
ಸದ್ಯ ಪ್ರಕರಣ ಸಂಬಂದ ಹೈಕೋರ್ಟ್ಗೆ ದೇವರಾಜ್ DM ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ವಿರುದ್ದ ಗರಂ ಆಗಿದ್ದು, ಸದ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೈಯಪ, BMRDA ಮತ್ತು ಶಾಂತಕುಮಾರ್ಗೆ ತುರ್ತು ನೋಟಿಸ್ ನೀಡಿದೆ. ಈ ತಿಂಗಳ 20ನೇ ತಾರೀಖಿನೊಳಗೆ ನೊಟೀಸ್ಗೆ ಉತ್ತರಿಸಲು ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ : ಯುವ ಡಿವೋರ್ಸ್ಗೆ ಸಪ್ತಮಿ ಗೌಡ ಕಾರಣ.. ನೋಟಿಸ್ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿ..!