ಬೆಂಗಳೂರು : ಹುಟ್ಟಿದ ನಾಲ್ಕೇ ತಿಂಗಳಿಗೆ ಬೆಂಗಳೂರಿನ ಪುಟ್ಟ ಕಂದಮ್ಮ ವಿಶ್ವ ದಾಖಲೆ ಬರೆದು, ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಪುಟ್ಟ ಕಂದನ ಹೆಸರು ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ.
ವಿಶ್ವ ದಾಖಲೆ ಬರೆದ ಈ ಪುಟ್ಟ ಕಂದನ ಹೆಸರು ಇಶಾನ್ವಿ. ಎರಡು ತಿಂಗಳಿದ್ದಾಗಲೇ ತಾಯಿ ಸ್ನೇಹ ಎರಡು ಫ್ಲಾಶ್ ಕಾರ್ಡ್ ಇಟ್ಟು ಒಂದನ್ನು ಗುರುತಿಸುವಂತೆ ಹೇಳಿದರೆ, ಕಂದ ಸರಿಯಾದ ಕಾರ್ಡ್ ಸೆಲೆಕ್ಟ್ ಮಾಡುತ್ತಿತ್ತು. ತಾಯಿ ಕಂದನಿಗೆ ಇದನ್ನೇ ಪ್ರಾಕ್ಟೀಸ್ ಮಾಡಿಸುತ್ತಾ ಬಂದಿದ್ದರು. ಇದೀಗ 4 ತಿಂಗಳ ಈ ವಂಡರ್ ಕಿಡ್ ತನ್ನ ಪ್ರತಿಭೆಯಿಂದ ವರ್ಲ್ಡ್ ರೆಕಾರ್ಡ್ ಮಾಡಿದೆ. 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿಗಳ ಚಿತ್ರಗಳನ್ನು ಈ ಕಂದಮ್ಮ ಫ್ಲಾಶ್ ಕಾರ್ಡ್‌ಗಳಲ್ಲಿ ಗುರುತಿಸಿ ದಾಖಲೆ ಬರೆದಿದೆ.
ಇಶಾನ್ವಿ 10 ಹಕ್ಕಿಗಳು, 10 ಸಾಕು ಪ್ರಾಣಿಗಳು, 10 ವಿವಿಧ ದೇಶದ ಧ್ವಜಗಳು, 10 ಹೂವುಗಳು, 10 ವಾಹನಗಳು, 10 ಕಾಡು ಪ್ರಾಣಿಗಳು, 11 ಕಲರ್ಸ್, 15 ತರಕಾರಿಗಳು, 14 ಹಣ್ಣುಗಳು, 13 ಜನರಲ್ ಇಮೇಜ್, 12 ಶೇಪ್ಸ್ ಗಳನ್ನು ಗುರುತಿಸುತ್ತಿದೆ. 125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುವ ಮೂಲಕ ದಾಖಲೆ ಬರೆದಿದೆ. ಈ ಹಿಂದೆ ಆಂಧ್ರಪ್ರದೇಶದ ಕೈವಲ್ಯ ಎಂಬ ಹೆಣ್ಣು ಮಗು ನಾಲ್ಕು ತಿಂಗಳಿಗೆ 120 ಫ್ಲಾಶ್ ಕಾರ್ಡ್ ಗುರುತಿಸಿ ರೆರ್ಕಾಂಡ್ ಮಾಡಿದ್ದಳು. ಇದೀಗ ಇಶಾನ್ವಿ ಕೈವಲ್ಯ ಮಾಡಿದ ರೆರ್ಕಾಡ್ನ್ನು ಬ್ರೇಕ್ ಮಾಡಿದ್ದಾಳೆ.
ಇದನ್ನೂ ಓದಿ : ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸ್ಕೆಚ್ – ಶಂಕಿತ ಉಗ್ರ NIA ಬಲೆಗೆ..!