ಬೆಂಗಳೂರು : ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಮಂಜುಳ ವಿಜಯಕುಮಾರ್ ಹಾಗೂ ನಾಮ ನಿರ್ದೇಶಿತ ಪಾಲಿಕೆ ಸದಸ್ಯ ಹೆಚ್.ವಿಜಯಕುಮಾರ್ ಕಾಂಗ್ರೆಸ್ ಪಕ್ಷ ತೊರೆದು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ, ಕೇಂದ್ರ ಲೋಕಸಭಾ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್, ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಶಿವನಗರ, ಮಹಾಗಣಪತಿನಗರ, ಮಾಜಿ ಪಾಲಿಕೆ ಸದಸ್ಯರ ನಿವಾಸ ಎದುರು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ದೇಶದ ಹಿತಕ್ಕಾಗಿ ಮತ್ತು ಪ್ರಧಾನಿ ನರೇಂದ್ರಮೋದಿರವರ ಆಡಳಿತ ಮೆಚ್ಚಿ ಶಿವನಗರ ವಾರ್ಡ್ ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಮಂಜುಳ ವಿಜಯಕುಮಾರ್ ಮತ್ತು ನಾಮ ನಿರ್ದೇಶಿತ ಪಾಲಿಕೆ ಸದಸ್ಯ ಹೆಚ್.ವಿಜಯಕುಮಾರ್ ರವರು ಕಾಂಗ್ರೆಸ್ ಪಕ್ಷ ತೊರೆದು ಇಂದು ಸಂಜೆ 5-30ಕ್ಕೆ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವದ ಎಲೆಕ್ಷನ್ ಹಬ್ಬ ಇಂದಿನಿಂದ ಶುರು – 21 ರಾಜ್ಯಗಳ 102 ಸ್ಥಾನಗಳಿಗೆ ಇಂದು ಮತದಾನ..!