Download Our App

Follow us

Home » ರಾಷ್ಟ್ರೀಯ » ಪ್ರಜಾಪ್ರಭುತ್ವದ ಎಲೆಕ್ಷನ್ ಹಬ್ಬ ಇಂದಿನಿಂದ ಶುರು – 21 ರಾಜ್ಯಗಳ 102 ಸ್ಥಾನಗಳಿಗೆ ಇಂದು ಮತದಾನ..!

ಪ್ರಜಾಪ್ರಭುತ್ವದ ಎಲೆಕ್ಷನ್ ಹಬ್ಬ ಇಂದಿನಿಂದ ಶುರು – 21 ರಾಜ್ಯಗಳ 102 ಸ್ಥಾನಗಳಿಗೆ ಇಂದು ಮತದಾನ..!

ನವದೆಹಲಿ : ಲೋಕಸಭೆಯ 543 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಚುನಾವಣೆ ಆಗುತ್ತಿದೆ. ಒಟ್ಟು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಕ್ಷೇತ್ರಗಳಿಗೆ ಇಂದು ಮತದಾನ ಆಗುತ್ತಿದೆ. ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ಆಗುತ್ತಿದೆ. ಪ್ರಧಾನಿ ಮೋದಿ ಮೂರನೇ ಅವಧಿಗೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೆ, ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ.

ಲೋಕಸಭಾ ಚುನಾವಣೆ: ಮೊದಲ ಹಂತದ ಮತದಾನ ಸಮಯ ಯಾವಾಗ? (ಏಪ್ರಿಲ್ 19) ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಸಂಜೆ 5ರವರೆಗೂ ಮತದಾನ ನಡೆಯುತ್ತದೆ. ಆರು ಗಂಟೆಯವರೆಗೆ ಹೆಚ್ಚುವರಿ ಸಮಯ ಇರುತ್ತದೆ. ಸಂಜೆ 5ರೊಳಗೆ ಮತದಾನಕ್ಕೆ ಬಂದವರಿಗೆ ಮತದಾನದ ಅವಕಾಶ ಸಿಗಲು ಒಂದು ಗಂಟೆ ಹೆಚ್ಚುವರಿ ಸಮಯ ನಿಗದಿ ಮಾಡಲಾಗಿದೆ.

ಯಾವ್ಯಾವ ರಾಜ್ಯಗಳಲ್ಲಿ ಇಂದು ಮತದಾನ ನಡೆಯಲಿದೆ?

  1. ತಮಿಳುನಾಡು: 39
  2. ರಾಜಸ್ಥಾನ: 12
  3. ಉತ್ತರಾಖಂಡ್: 6
  4. ಉತ್ತರಪ್ರದೇಶ: 8
  5. ಅಸ್ಸಾಂ: 5
  6. ಬಿಹಾರ: 4
  7. ಛತ್ತೀಸ್​ಗಡ: 1
  8. ಜಮ್ಮು ಕಾಶ್ಮೀರ: 1
  9. ಮಧ್ಯಪ್ರದೇಶ: 6
  10. ಮಹಾರಾಷ್ಟ್ರ: 5
  11. ಪಶ್ಚಿಮ ಬಂಗಾಳ: 3
  12. ಮಣಿಪುರ್: 2
  13. ಮೇಘಾಲಯ: 2
  14. ಮಿಝೋರಾಂ: 1
  15. ನಾಗಾಲ್ಯಾಂಡ್: 1
  16. ಪುದುಚೇರಿ: 1
  17. ಸಿಕ್ಕಿಂ: 1
  18. ತ್ರಿಪುರಾ: 1
  19. ಅಂಡಮಾನ್ ನಿಕೋಬಾರ್: 1 ಸ್ಥಾನ
  20. ಅರುಣಾಚಲಪ್ರದೇಶ: 2
  21. ಲಕ್ಷದ್ವೀಪ: 1

ಅಭ್ಯರ್ಥಿಗಳ ಸಂಖ್ಯೆ, ಪಕ್ಷಗಳ ಬಲಾಬಲ ವಿವರ : 102 ಕ್ಷೇತ್ರಗಳಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ. 8ರಷ್ಟಿದೆ. 102 ಸ್ಥಾನಗಳಲ್ಲಿ ಎನ್​​ಡಿಎ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟ ತಲಾ 48 ಸ್ಥಾನಗಳನ್ನು ಹೊಂದಿವೆ. ಬಿಎಸ್​ಪಿ 3 ಸ್ಥಾನ ಹೊಂದಿದೆ. ಎಐಎಡಿಎಂಕೆ, ಶಿವಸೇನಾ ಮತ್ತು ಎನ್​ಸಿಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದವು. 2019ರ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಡಿಎಂಕೆಯೊಂದೇ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ, ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟ 38 ಸ್ಥಾನಗಳನ್ನು ಪಡೆದಿತ್ತು. ಎನ್​ಡಿಎಗೆ ಒಂದು ಸ್ಥಾನ ಮಾತ್ರ ಸಿಕ್ಕಿತ್ತು.

ಇದನ್ನೂ ಓದಿ : ಗದಗ : ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಕೊ*ಲೆ – ಮಲಗಿದ್ದಲ್ಲೇ ಹ*ತ್ಯೆಗೈದು ದುಷ್ಕರ್ಮಿಗಳು ಪರಾರಿ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here