Download Our App

Follow us

Home » ರಾಷ್ಟ್ರೀಯ » ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬಾಲ ರಾಮನ ಸಂಪೂರ್ಣ ದರ್ಶನ..!

ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬಾಲ ರಾಮನ ಸಂಪೂರ್ಣ ದರ್ಶನ..!

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಿರುವ ರಾಮ ಲಲ್ಲಾ ಮೂರ್ತಿಯ ಎಕ್ಸ್‌ಕ್ಲೂಸಿವ್ ಫೋಟೋಗಳು ಬಿಟಿವಿ ಗೆ ಲಭ್ಯವಾಗಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮ ಲಲ್ಲಾ ಮೂರ್ತಿ ಸಂಪೂರ್ಣ ದರ್ಶನ ನೀಡುವ ಫೋಟೋಗಳು ಇಲ್ಲಿದೆ.

ಮುದ್ದಾಗಿ ನಗುವ ಶ್ರೀ ರಾಮಲಲ್ಲಾ ಮೂರ್ತಿ ಇದಾಗಿದ್ದು, ಇಡೀ ಜಗತ್ತೇ ಕಾಯ್ತಿದ್ದ ಈ ಅದ್ಭುತ ದೃಶ್ಯಕ್ಕೆ ಅಯೋಧ್ಯೆ ಸಾಕ್ಷಿಯಾಗಿದೆ.  ಅಯೋಧ್ಯೆಯಲ್ಲಿ ಶ್ರೀರಾಮ ಭವ್ಯ-ದಿವ್ಯ ದರ್ಶನವನ್ನು ಕೊಟ್ಟಿದ್ದು, ಧನುರ್ಧಾರಿಯಾಗಿರುವ ಬಾಲರಾಮನ ಪೂರ್ಣ ವಿಗ್ರಹದಲ್ಲಿ ಮಂದಸ್ಮಿತ, ರಾಮನ ಕೈಯಲ್ಲಿ ಜಗಮಗಿಸೋ ಕೋದಂಡ ಕೂಡ ಕಾಣಬಹುದು. ಬಾಲರಾಮನ ಮುಖದ ತುಂಬೆಲ್ಲಾ ದಿವ್ಯಕಾಂತಿ ಹೊಳೆಯುತ್ತಿದೆ.

ಇದೇ ಮೊದಲ ಬಾರಿಗೆ ಬಾಲ ರಾಮನ ಪೂರ್ಣ ದರ್ಶನವಾಗಿದ್ದು, ರಾಮನ ಕಣ್ಣಿನ ಪಟ್ಟಿ ತೆರೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜನವರಿ 22ಕ್ಕೆ ಇದೇ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಲಿದೆ.

ಮೂರ್ತಿಯ ಪ್ರಭಾವಳಿಯ ಸುತ್ತ ವಿಷ್ಣುವಿನ ದಶಾವತಾರ ಕಾಣಸಿಗುತ್ತೆ. ಮೂರ್ತಿಯ ಪ್ರಭಾವಳಿಯ ಕೆಳಗೆ ನಿಂತ ಬಲಭಾಗ ಭಕ್ತಾಂಜನೇಯ, ಎಡಭಾಗ ಗರುಡ ಮೂರ್ತಿ ಕಾಣಸಿಗುತ್ತೆ. ಇನ್ನು ರಾಮನ ಬಲಗೈನಲ್ಲಿ ಚಿನ್ನದ ಬಾಣ ಹಾಗೂ ಎಡಗೈನಲ್ಲಿ ಚಿನ್ನದ ಬಿಲ್ಲು ಹಿಡಿದು ಬ್ರಹ್ಮಕಮಲದ ಮೇಲೆ ನಿಂತಿದ್ದಾನೆ. ವಿರಾಜಮಾನವಾಗಿ ನಿಂತಿರುವ ಶ್ರೀ ರಾಮ ಜನವರಿ 22ಕ್ಕೆ ಕೋಟ್ಯಾನುಕೋಟಿ ಭಕ್ತರಿಗೆ ದರ್ಶನ ನೀಡಲಿದ್ದಾನೆ.

ಇದನ್ನೂ ಓದಿ : ಅಯೋಧ್ಯೆ ಬಾಲರಾಮನ ಮೂರ್ತಿ ಹೇಗಿದೆ ಗೊತ್ತಾ? – ಮೊದಲ ಚಿತ್ರ ವೈರಲ್‌..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here