ಆರ್‌ಸಿಬಿ-ಪಂಜಾಬ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ.. ಮ್ಯಾಚ್ ರದ್ದಾದರೆ ‘ಚಾಂಪಿಯನ್’ ಕಿರೀಟ ಯಾವ ತಂಡಕ್ಕೆ? 

ಅಹಮದಾಬಾದ್​ : ಐಪಿಎಲ್ 2025ರ ಫೈನಲ್ ಪಂದ್ಯವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ತಂಡಗಳಿಗೂ ಮೊದಲ ಬಾರಿಗೆ ಚಾಂಪಿಯನ್‌ ಕಿರೀಟ ತೊಡುವ ಅವಕಾಶವಿರುವುದರಿಂದ ಈ ಬಾರಿಯ ಐಪಿಎಲ್ ಫೈನಲ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಆದಾಗ್ಯೂ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಐಪಿಎಲ್ 2025ರ ವಿಜೇತರು ಯಾರು? ಪಂಜಾಬ್ ಮತ್ತು ಬೆಂಗಳೂರು ಐಪಿಎಲ್ ಟ್ರೋಫಿ ಹಂಚಿಕೊಳ್ಳುತ್ತವೆಯೇ? ಪಂದ್ಯಾವಳಿಯ ನಿಯಮಗಳೇನು ಎಂಬುವುದು ಇಲ್ಲಿದೆ ಓದಿ..

ಮಳೆಯಿಂದಾಗಿ ಫೈನಲ್ ರದ್ದಾದರೆ? ಇಂದು ಅಹಮದಾಬಾದ್‌ನಲ್ಲಿ ನಡೆಯಲ್ಲಿರುವ ಫೈನಲ್ ಪಂದ್ಯಕ್ಕೆ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಅಂದರೆ ಈ ಫೈನಲ್ ಪಂದ್ಯಕ್ಕೆ ಹೆಚ್ಚುವರಿಯಾಗಿ 2 ಗಂಟೆಗಳನ್ನು ನಿಗದಿಪಡಿಸಲಾಗಿದೆ. ಆದರೆ ಈ ಹೆಚ್ಚುವರಿ ಸಮಯದಲ್ಲೂ ಪಂದ್ಯವನ್ನು ನಡೆಸಲಾಗದೆ ಮಳೆಯಿಂದಾಗಿ ರದ್ದಾದರೆ, ಜೂನ್ 4 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಮೀಸಲು ದಿನದಂದು ಸಹ ಮಳೆ ಬಂದು ಈ ಪಂದ್ಯವನ್ನು ನಡೆಸಲಾಗದಿದ್ದರೆ, ಲೀಗ್ ಹಂತದಲ್ಲಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇದರರ್ಥ ಮೀಸಲು ದಿನದಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಪಂಜಾಬ್ ಕಿಂಗ್ಸ್ ಐಪಿಎಲ್ 2025ರ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ.

ಸದ್ಯಕ್ಕೆ, ಆರ್‌ಸಿಬಿ ಅಭಿಮಾನಿಗಳು ಈ ಪಂದ್ಯದಲ್ಲಿ ಮಳೆ ಬರಬಾರದು ಮತ್ತು ಪಂದ್ಯ ಕೊನೆಯವರೆಗೂ ನಡೆಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದಾಗ್ಯೂ, ವರದಿಯ ಪ್ರಕಾರ, ಇಂದು ಸಂಜೆ ಮೋದಿ ಕ್ರೀಡಾಂಗಣದಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು ಫೈನಲ್ ಪಂದ್ಯದ ಸಮಯದಲ್ಲಿ ಮಳೆ ಬಂದರೂ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಈ ಮೈದಾನದ ಸೌಲಭ್ಯಗಳು ತುಂಬಾ ಚೆನ್ನಾಗಿವೆ. ಇಲ್ಲಿನ ಒಳಚರಂಡಿ ವ್ಯವಸ್ಥೆ ಅದ್ಭುತವಾಗಿದೆ. ಮಳೆ ನಿಂತ 20 ನಿಮಿಷಗಳ ನಂತರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಸುಲಭವಾಗಿ ಆರಂಭವಾಗಬಹುದು.

ಇದನ್ನೂ ಓದಿ : 12 ಮಂದಿ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ!

Btv Kannada
Author: Btv Kannada

Read More