ಬೆಂಗಳೂರು : ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾಗಿದ್ದ ಕೆ.ಎ. ದಯಾನಂದ್ ಅವರನ್ನು ಕರ್ನಾಟಕ ಗೃಹ ಮಂಡಳಿ ಆಯುಕ್ತರನ್ನಾಗಿ ಹಾಗೂ ಐಎಎಂ ಸ್ಪೆಷಲ್ ಆಫೀಸರ್ ಆಗಿದ್ದಂತಹ ಅಮಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಪಿಡಬ್ಲೂಯಡಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಡಾ.ಎಸ್. ಸೆಲಕುಮಾರ್ ಅವರಿಂದ ಖಾಲಿಯಾದ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಐಎಂಎ ವಿಶೇಷ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಹೆಚ್ಚುವರಿ ಹೊಣೆಗಾರಿಕೆ ನೀಡಿ ನೇಮಿಸಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾಗಿದ್ದ ಕೆ.ಎ.ದಯಾನಂದ್ ಅವರನ್ನು ಕರ್ನಾಟಕ ಗೃಹಮಂಡಳಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದ್ದು, ಮುದ್ರಾಂಕ ಇಲಾಖೆ ಆಯುಕ್ತ ಸ್ಥಾನಕ್ಕೆ ಪೊಮ್ಮಲ ಸುನೀಲ್ ಕುಮಾರ್ ಅವರನ್ನು ಹೆಚ್ಚುವರಿ ಹೊಣೆ ನೀಡಿ ವರ್ಗಾವಣೆ ಮಾಡಲಾಗಿದೆ.
ಇನ್ನೂ ನವೀನ್ ರಾಜ್ ಸಿಂಗ್ ಅವರನ್ನು ಯವನಿಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರೇ, ವಿ. ಅನ್ಬು ಕುಮಾರ್ ಅವರನ್ನು KSRTC ಎಂಡಿಯಿಂದ ವರ್ಗಾವಣೆ ಮಾಡಿ ಹೌಸಿಂಗ್ ಡಿಪಾರ್ಟಮೆಂಟ್ ಸೆಕ್ರೇಟರಿ ಹಾಗೂ ವೆಟರ್ನರಿ ಸೈನ್ಸ್ ಅಂಡ್ ಫಿಷರಿಂಗ್ ಇಲಾಖೆಯ ಸೆಕ್ರೇಟರಯಾಗಿ ನೇಮಕ ಮಾಡಲಾಗಿದೆ.
ಸಮೀರ್ ಶುಕ್ಲ ಅವರನ್ನು ಎಂಎಸ್ಎಂಇ ಮತ್ತು ಮೈನಿಂಗ್ ಕಾರ್ಯದರ್ಶಿ ಹುದ್ದೆಗೆ ನೇಮಸಿದ್ದರೇ, ರಂದೀಪ್ ಚೌದರಿ ಅವರನ್ನು ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ, ಸೆಕ್ರೇಟರಿ ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಮತ್ತು ಸ್ಟಾಟಿಟಿಕ್ಸ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಐಎಎಸ್ ಅಧಿಕಾರಿ ರಂದೀಪ್ ಡಿ. ಅವರನ್ನು ಯವನಿಕದ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ ಎಸ್ಟಿ ವೆಲ್ ಫೇರ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪೊಮ್ಮಲ ಸುನೀಲ್ ಕುಮಾರ್ ಅವರನ್ನು ಕಂದಾಯ ಇಲಾಖೆಯ ಕಮೀಷನರ್ ಹುದ್ದೆಯಿಂದ ನೋಂದಣಿ ಮತ್ತು ಮುದ್ರಣಾಂಕ ಇಲಾಖೆಯ ಐಜಿಯಾಗಿ ನೇಮಕ ಮಾಡಲಾಗಿದೆ. ರೇರಾ ಕಾರ್ಯದರ್ಶಿ ಇಬ್ರಾಹಿಂ ಮೈಗುರ್ ಅವರನ್ನು ಕೆಎಸ್‌ಆರ್‌ಟಿಸಿ ನಿರ್ದೇಶಕ (ಐಟಿ) ಹುದ್ದೆಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ : ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಇಂದು ಮದಗಜಗಳ ಮಹಾಕದನ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್ ತಂಡ!
