RCB ಗೆದ್ರೆ ಒಂದು ದಿನ ರಜೆ ಘೋಷಿಸಿ – ಸಿಎಂಗೆ ಅಭಿಮಾನಿ ಪತ್ರ!

ಬೆಂಗಳೂರು : ಪ್ಲೇ ಆಫ್​ನಲ್ಲಿ ಪಂಜಾಬ್ ವಿರುದ್ಧ RCB ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶಿಸಿದೆ. IPL ಟ್ರೋಫಿಗಾಗಿ ಬರೋಬ್ಬರಿ 18 ವರ್ಷಗಳಿಂದ ಕಾಯ್ತಿರುವ RCB ಅಭಿಮಾನಿಗಳ ಕನಸು ಈ ಬಾರಿ ನನಸಾಗುವ ನಿರೀಕ್ಷೆ ಹೆಚ್ಚಿದೆ. ಈ ಸಲ ಕಪ್ ನಮ್ದೆ ಅಂತ RCB ಫ್ಯಾನ್ಸ್ ಕೂಗಿ ಕೂಗಿ ಹೇಳ್ತಿದ್ದಾರೆ. ಇದರ ನಡುವೆಯೇ RCB ಅಭಿಮಾನಿಯೊಬ್ಬ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಅಭಿಮಾನಿಯಾಗಿದ್ದು, ಆರ್‌ಸಿಬಿ ಕಪ್ ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿ ಬರೆದ ಪತ್ರದಲ್ಲೇನಿದೆ?

ಐಪಿಎಲ್​​ ಪಂದ್ಯದಲ್ಲಿ ಒಂದು ವೇಳೆ ಆರ್​ಸಿಬಿ ತಂಡ ಫೈನಲ್​ಗೆ ಹೋಗಿ ಕಪ್​ ಗೆದ್ದರೇ ಆ ದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್​ಸಿಬಿ ಫ್ಯಾನ್ಸ್​ ಹಬ್ಬ’ ಅಂತ ಅಧೀಕೃತವಾಗಿ ಘೋಷಿಸಿ ಪ್ರತಿವರ್ಷ ಸರ್ಕಾರ ರಜೆ ನೀಡಬೇಕು.

ಏಕೆಂದರೆ ಆರ್​ಸಿಬಿ ಫ್ಯಾನ್ಸ್​ಗಳ ಬಹುದಿನದ ಕನಸು ನನಸಾಗಲಿದ್ದು, ಕರ್ನಾಟಕ ರಾಜ್ಯೋತ್ಸವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸುತ್ತೇವೋ ಅದೇ ರೀತಿ ಆರ್​ಸಿಬಿ ಫ್ಯಾನ್ಸ್​​​ ಹಬ್ಬ ಆಚರಿಸುವುದಕ್ಕೆ ಕರ್ನಾಟಕ ಸರ್ಕಾರ ಅನುವು ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ. ಇದನ್ನು ಕರ್ನಾಟಕ ಸರ್ಕಾರ ಗಣನೀಯವಾಗಿ ತೆಗೆದುಕೊಂಡು ರಜೆ ಮತ್ತು ಆರ್​ಸಿಬಿ ಫ್ಯಾನ್ಸ್​ ಹಬ್ಬ ಆಚರಿಸುವುದಕ್ಕೆ ಪರವಾಣಿಗೆ ಕೊಡಬೇಕೆಂದು ಎಲ್ಲಾ ಆರ್​ಸಿಬಿ ಫ್ಯಾನ್ಸ್ ಪರವಾಗಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ.

ಇದನ್ನೂ ಓದಿ :ಅವೈಜ್ಞಾನಿಕ ಹೆದ್ದಾರಿ ವಿರುದ್ಧ ಯಲಹಂಕ ಶಾಸಕ SR ವಿಶ್ವನಾಥ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ! 

Btv Kannada
Author: Btv Kannada

Read More