ಲಾಕರ್​ನಲ್ಲಿಟ್ಟಿದ್ದ ಬ್ಯಾಂಕ್ ಮ್ಯಾನೇಜರ್ ಚಿನ್ನ ಕದ್ದ ಸಿಬ್ಬಂದಿಗಳು – ಬಸವೇಶ್ವರ ನಗರ ಪೊಲೀಸರಿಂದ ಇಬ್ಬರ ಬಂಧನ!

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಬ್ಯಾಂಕ್​ ಸಿಬ್ಬಂದಿಗಳ ಕಳ್ಳಾಟ ಹೆಚ್ಚಾಗ್ತಿದೆ. ಹಣದಾಸೆಗಾಗಿ ತಾವು ಕೆಲಸ ಮಾಡೋ ಬ್ಯಾಂಕ್​​ನಲ್ಲೇ ಕಳ್ಳತನ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇದೀಗ ಬೆಂಗಳೂರಿನ ಖಾಸಗಿ ಬ್ಯಾಂಕ್​​ನಲ್ಲಿ ಕಳ್ಳತನದ ಪ್ರಕರಣ ಬಯಲಿಗೆ ಬಂದಿದೆ.

ಲಾಕರ್​​ನಲ್ಲಿಟ್ಟ ಬ್ಯಾಂಕ್ ಮ್ಯಾನೇಜರ್ ಚಿನ್ನವನ್ನೇ ಬ್ಯಾಂಕ್ ಸಿಬ್ಬಂದಿಗಳು ಸೇರಿ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಸವೇಶ್ವರ ನಗರದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಸಿರಿಶಾ ಅವರು ಅದೇ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿದ್ದು ಸುಮಾರು 250 ಗ್ರಾಂ ಗೋಲ್ಡ್ ಹಾಗೂ ಕೆಲ ದಾಖಲಾತಿಗಳನ್ನು ಇಟ್ಟಿದ್ರು. ಆದರೆ ಕಳೆದ‌ ಡಿಸೆಂಬರ್ ಲಾಕರ್ ತೆರೆದಾಗ 20 ಲಕ್ಷ ಮೌಲ್ಯದ ಚಿನ್ನ ಕಾಣೆಯಾಗಿತ್ತು.

ಬ್ಯಾಂಕ್ ಸಿಬ್ಬಂದಿಗಳಾದ ಐಶ್ವರ್ಯಾ ಹಾಗೂ ಹರ್ಷಿತ್ ಮೇಲೆ ಅನುಮಾನ ಇದೆ ಎಂದು ಬಸವೇಶ್ವರ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಮಾಡಿದಾಗ ಬ್ಯಾಂಕ್ ಸಿಬ್ಬಂದಿಗಳಾದ ಐಶ್ವರ್ಯಾ ಹಾಗೂ ಹರ್ಷಿತ್ ಕೃತ್ಯ  ಬಯಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 16 ಲಕ್ಷ ಮೌಲ್ಯದ 170 ಗ್ರಾಂ ಚಿನ್ನ ರಿಕವರಿ ಮಾಡಲಾಗಿದ್ದು ಈ ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿಬೆಂಗಳೂರು-ಮಂಗಳೂರು ರೈಲ್ವೇ ಪ್ರಯಾಣಿಕರಿಗೆ ಬಿಗ್ ಶಾಕ್ – 5 ತಿಂಗಳು ಕಾಲ 6 ರೈಲು ಸಂಚಾರ ಬಂದ್​ ಆಗ್ತಿರೋದು ಯಾಕೆ?

Btv Kannada
Author: Btv Kannada

Read More