ಬೆಂಗಳೂರು : ದಿನನಿತ್ಯದ ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ತಿರುಗಿ, ನಿವೃತ್ತ ಬಿಎಂಟಿಸಿ ಚಾಲಕರಾಗಿದ್ದ ವೆಂಕಟೇಶನ್ (65) ಅವರು ಬಟ್ಟೆ ಒಣಗಿಸುವ ಹಗ್ಗದಿಂದ ತಮ್ಮ ಪತ್ನಿ ಬೇಬಿ (60)ಯನ್ನು ಕೊಲೆ ಮಾಡಿ, ಬಳಿಕ ಅದೇ ಹಗ್ಗದಿಂದ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ.
ನಿವೃತ್ತ ಬಿಎಂಟಿಸಿ ಬಸ್ ಚಾಲಕರಾಗಿದ್ದ ವೆಂಕಟೇಶನ್ ಮತ್ತು ಅವರ ಪತ್ನಿ ಬೇಬಿ ನಡುವೆ ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೂ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಬೇಬಿಯವರು ಸ್ಟ್ರೋಕ್‌ನಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದರು. ಈ ವೇಳೆ ಜಗಳ ತಾರಕಕ್ಕೇರಿದಾಗ ಆವೇಶಗೊಂಡ ವೆಂಕಟೇಶನ್ ಅವರು ಮನೆಯಲ್ಲಿ ಬಟ್ಟೆ ಒಣಗಿಸಲು ಬಳಸುತ್ತಿದ್ದ ಹಗ್ಗವನ್ನು ತೆಗೆದುಕೊಂಡು ಪತ್ನಿ ಬೇಬಿ ಅವರ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ತೀವ್ರ ಪಾಶ್ಚಾತ್ತಾಪಕ್ಕೆ ಒಳಗಾದ ವೆಂಕಟೇಶನ್, ಅದೇ ಹಗ್ಗವನ್ನು ಬಳಸಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣ – ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಸಂಕಷ್ಟ, 272 ಸಾಕ್ಷಿಗಳ ವಿಚಾರಣೆ ಆರಂಭ!







