ರೇಣುಕಾ ಸ್ವಾಮಿ ಕೊಲೆ ಪ್ರಕರಣ – ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಸಂಕಷ್ಟ, 272 ಸಾಕ್ಷಿಗಳ ವಿಚಾರಣೆ ಆರಂಭ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆ್ಯಂಡ್ ಗ್ಯಾಂಗ್ಗೆ ಟ್ರಯಲ್ ಸಂಕಷ್ಟ ಶುರುವಾಗಿದೆ. ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಬರೋಬ್ಬರಿ 272 ಸಾಕ್ಷಿಗಳ ಬೃಹತ್ ಪಟ್ಟಿಯನ್ನು ಸಲ್ಲಿಸಿದ್ದು, ಹಂತ ಹಂತವಾಗಿ ಈ ಎಲ್ಲಾ ಸಾಕ್ಷಿಗಳ ವಿಚಾರಣೆ ನಡೆಯಲಿದೆ.

ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳ ಆಧಾರದ ಮೇಲೆ ಸಾಕ್ಷಿಗಳನ್ನು 10 ಪ್ರಮುಖ ವಿಭಾಗಗಳಲ್ಲಿ ವರ್ಗೀಕರಿಸಿದೆ. ಈ ಪಟ್ಟಿಯಲ್ಲಿ ಯಾರ್ಯಾರು ಇದ್ದಾರೆ ಮತ್ತು ಎಷ್ಟು ಮಂದಿ ಯಾವ ವಿಭಾಗಕ್ಕೆ ಸೇರಿದ್ದಾರೆ ಎಂಬ ವಿವರ ಇಲ್ಲಿದೆ.

ಪ್ರೈವೇಟ್ ಸಾಕ್ಷಿಗಳು – 100, ಐ ವಿಟ್ನೇಸ್ ಗಳ ಸಂಖ್ಯೆ – 2, ಭಾಗಶಃ ಪ್ರತ್ಯಕ್ಷ ಸಾಕ್ಷಿಗಳು (ಸಾಂದರ್ಭಿಕ ಸಾಕ್ಷಿಗಳು) – 5, ಮಹಜರ್ ವಿಟ್ನೇಸ್‌ಗಳು – 62, FSL/CFSL ಸಿಬ್ಬಂದಿ – 15, ಡಾಕ್ಟರ್ – 1, ತಾಂತ್ರಿಕ ಸಾಕ್ಷಿಗಳು – 4, ಬ್ಯಾಂಕ್ ಅಧಿಕಾರಿಗಳು – 17, ಮ್ಯಾಜಿಸ್ಟ್ರೇಟ್ – 2, ಪೊಲೀಸ್ ಅಧಿಕಾರಿಗಳು – 64

ಪ್ರಾಸಿಕ್ಯೂಷನ್ ಕೊಟ್ಟ ಸಾಕ್ಷಿಗಳ ಪಟ್ಟಿಯ ಲಿಸ್ಟ್ ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಯು  CW – 84, ರೇಣುಕಾ ಸ್ವಾಮಿ ಪತ್ನಿ ಸಹನ CW-9. ಪೊಲೀಸರು ರೇಣುಕಾ ಸ್ವಾಮಿ ತಂದೆ-ತಾಯಿಯನ್ನು ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿಗಣಿಸಿದ್ದಾರೆ. ರೇಣುಕಾ ಸ್ವಾಮಿ ತಂದೆ CW-7 ಕಾಶಿನಾಥಯ್ಯ, ರೇಣುಕಾ ಸ್ವಾಮಿ ತಾಯಿ CW-8 ರತ್ನಪ್ರಭಾ, ಐ ವಿಟ್ನೇಸ್ ಗಳಾಗಿರುವ ಕಿರಣ್, ಪುನೀತ್, ಕಿರಣ್ CW- 76 , ಪುನೀತ್ CW-91, ಸಮನ್ಸ್ ಜಾರಿಯಾದ ದಿನಾಂಕದಂದು ಕೋರ್ಟ್ ಗೆ ಹಾಜರಾಗಿ ಸಾಕ್ಷಿ ಹೇಳಬೇಕಿರುವ ಪಟ್ಟಿಯಲ್ಲಿರುವ ಸಾಕ್ಷಿಗಳು.

ಇದನ್ನೂ ಓದಿ : ಆಶಿಕಾ ರಂಗನಾಥ್ ಸಂಬಂಧಿ ಅಚಲ ಆತ್ಮಹತ್ಯೆ ಕೇಸ್ – ಪೊಲೀಸರ ಕೈಸೇರಿದ CDR ರಿಪೋರ್ಟ್, ಆರೋಪಿ ಜೊತೆ ಸಂಪರ್ಕ ಪತ್ತೆ! 

Btv Kannada
Author: Btv Kannada

Read More