ಬರ್ತಿದ್ದಾಳೆ “ಜೈ ಲಲಿತಾ”.. ಡಿ.8ರಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಶುರು!

ಕನ್ನಡ ಕಿರುತೆರೆಯಲ್ಲಿ ಹೊಸ-ಹೊಸ ಕಥೆಗಳು ಆರಂಭವಾಗುವುದು ಸರ್ವೇ ಸಾಮಾನ್ಯ ಆದರೆ ವೀಕ್ಷಕರಿಗೆ ಮನಮುಟ್ಟುವ ಕಥೆಗಳನ್ನು ನೀಡುತ್ತಾ ಬಂದಿರುವ ಹೆಗ್ಗಳಿಕೆ ಕನ್ನಡಿಗರ ಹೆಮ್ಮೆಯ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ. ಇದೀಗ ನಿಮ್ಮ ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ವಿಭಿನ್ನ ಕಥಾ ಹಂದರದ ಹೊಸ ಕಥೆ “ಜೈ ಲಲಿತಾ”.

ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು…ಆದರೆ ಒಳ್ಳೆ ಕೆಲ್ಸ ಸಿಗತ್ತೆ ಅಂತ ಅಲ್ಲ- ಮದ್ವೆ ಆಗೋದಕ್ಕೆ ಒಳ್ಳೇ ಹುಡ್ಗ ಸಿಗ್ತಾನೆ ಅನ್ನೋ ಆಸೆ. ನಟ ರಾಕಿಂಗ್ ಸ್ಟಾರ್ ಯಶ್​ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ. ಥಿಯೇಟರ್​ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನ್, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು.

ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್​ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡೋ ಶೂರ. ಅಚಾನಕ್ ಆಗಿ ಪಾಲಿಟಿಕ್ಸ್​ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ.

ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಈ ಕಥೆಯ ಮುಖ್ಯ ಹಂದರ.

ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ ‘ಶ್ರೀ ಭ್ರಾಮರೀ ಕ್ರಿಯೇಶನ್ಸ್’ ಎಂಬ ನಿರ್ಮಾಣ ಸಂಸ್ಥೆಯಿಂದ ‘ಜೈ ಲಲಿತಾ’ ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಶುರುವಾಗ್ತಿದೆ ಆಕಸ್ಮಿಕವಾಗಿ ಅಧಿಕಾರ ಪಡೆದು, ಧೈರ್ಯದಿಂದ ಮುನ್ನಡೆಯೋ ಮುದ್ದು ಬಜಾರಿಯ ಕಥೆ “ಜೈ ಲಲಿತಾ” ಡಿ. 8 ರಿಂದ ಪ್ರತಿದಿನ ರಾತ್ರಿ 9.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

ಇದನ್ನೂ ಓದಿ : ಡಿ.11ಕ್ಕೆ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ದಿ ಡೆವಿಲ್” ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್!

Btv Kannada
Author: Btv Kannada

Read More