ಬೆಂಗಳೂರು : ಕರ್ನಾಟಕದ ಇತಿಹಾಸದಲ್ಲಿ ಒಂದು ಮಹತ್ವದ ಬದಲಾವಣೆಯಾಗಿದೆ. ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನದ ಹೆಸರನ್ನು ಬದಲಾಯಿಸಿ ಲೋಕ ಭವನ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಅಧಿಕೃತ ಸೂಚನೆಯನ್ನು ಹೊರಡಿಸಿದೆ.

ಕೇಂದ್ರ ಗೃಹ ಇಲಾಖೆಯ ನಿರ್ದೇಶನದಂತೆ, ರಾಜ ಭವನವನ್ನು ಲೋಕ ಭವನ ಎಂದು ಮರುನಾಮಕರಣ ಮಾಡಲಾಗಿದೆ. ಈ ನಿರ್ಧಾರವು ತಕ್ಷಣದಿಂದ ಜಾರಿಗೆ ಬಂದಿದೆ. ಈ ಐತಿಹಾಸಿಕ ಕಟ್ಟಡವು ಇನ್ನು ಮುಂದೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಲೋಕ ಭವನ ಎಂದೇ ಉಲ್ಲೇಖಿಸಲ್ಪಡುತ್ತದೆ.

ಈ ಹೆಸರು ಬದಲಾವಣೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಇನ್ಮುಂದೆ ಅಧಿಕೃತ ಉಲ್ಲೇಖಗಳಲ್ಲಿ ‘ರಾಜ ಭವನ’ ಬದಲಿಗೆ ‘ಲೋಕ ಭವನ’ ಎಂದೇ ಬಳಸಬೇಕು ಎಂದು ನಿರ್ದೇಶಿಸಲಾಗಿದೆ.

ಇದನ್ನೂ ಓದಿ : ನ್ಯೂ ಇಯರ್ಗೆ ಕಿಕ್ಕೇರಿಸಲು ಇಟ್ಟಿದ್ದ 28 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ – ಇಬ್ಬರು ವಿದೇಶಿ ಪ್ರಜೆಗಳು ಅರೆಸ್ಟ್!
Author: Btv Kannada
Post Views: 102







