ಸದ್ದಿಲ್ಲದೇ ನಿರ್ದೇಶಕ ರಾಜ್ ನಿಡಿಮೋರು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ!

ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ ಆವರಣದಲ್ಲಿರುವ ಲಿಂಗಭೈರವಿ ದೇವಿಯ ದೇವಸ್ಥಾನದಲ್ಲಿ ಇಂದು ಸರಳ ವಿವಾಹವಾಗಿದ್ದಾರೆ. ಸಮಂತಾ ಕೆಂಪು ಸೀರೆ ಧರಿಸಿ ಮಿಂಚಿದ್ರೆ, ರಾಜ್ ನಿಡಿಮೋರು ವೈಟ್ & ವೈಟ್ ಕುರ್ತಾ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.

ಫ್ಯಾಮಿಲಿ ಮ್ಯಾನ್, ಸಿಟಾಡೆಲ್ ಹನಿಬನಿ ನಿರ್ದೇಶಕನ ಜೊತೆ ಸಮಂತಾ ಮದುವೆಯಾಗಿದ್ದಾರೆ. ಬಹಳ ದಿನಗಳಿಂದ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ಇದೀಗ ಗುಟ್ಟಾಗಿ ಕಲ್ಯಾಣವಾಗಿರುವ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಮದುವೆಯ ಫೋಟೋಗಳನ್ನ ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೂ 2ನೇ ವಿವಾಹ.

ಇನ್ನು ಸಮಂತಾ ಖ್ಯಾತ ನಟ ನಾಗಚೈತನ್ಯ ಜೊತೆಗಿನ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ವೆಬ್‌ಸಿರೀಸ್‌ಗಳ ಮೂಲಕ ಪರಿಚಯವಾದ ಬಹುಕಾಲದ ಒಡನಾಡಿ ರಾಜ್ ಜೊತೆ ಸ್ಯಾಮ್ ಪ್ರೀತಿಯಲ್ಲಿ ಬಿದ್ದಿದ್ದು ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಿಂಗಭೈರವಿ ದೇವಿಯ ಆರಾಧಕಿ ಆಗಿರುವ ಸಮಂತಾ ಇದೀಗ ಅದೇ ದೇವಿಯ ಮುಂದೆ ದಾಂಪತ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸರಳ ವಿವಾಹ ಸುಂದರ ಫೋಟೋಗಳನ್ನ ಸಮಂತಾ ರಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ : ಪ್ರೆಸ್ಟೀಜ್ ಫಾಲ್ಕನ್ ಅಪಾರ್ಟ್​ಮೆಂಟ್​​ನಲ್ಲಿ ಮಕ್ಕಳಿಗೆ ಕರುಳುಬೇನೆ ರೋಗ!

Btv Kannada
Author: Btv Kannada

Read More