ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಬಹುನಿರಿಕ್ಷಿತ ಚಿತ್ರ ’45’ ಡಿ.25ರಂದು ತೆರೆಗಪ್ಪಳಿಸಲಿದೆ. ಈ ಚಿತ್ರದ ‘AFRO ಟಪಾಂಗ್’ ಶೀರ್ಷಿಕೆಯ ಹಾಡು ಈಗಾಗಲೇ ರಿಲೀಸ್ ಆಗಿದ್ದು, ಸಾಂಗ್ ಸಖತ್ ಸದ್ದು ಮಾಡಿದೆ. ಇದೀಗ ಸೂಪರ್ ಹಿಟ್ ಸಾಂಗ್ನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಎಂ.ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿ ಬಿಗ್ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟ್ ಸಲುವಾಗಿ ಗಮನ ಸೆಳೆಯುತ್ತಿರುವ ಸಿನಿಮಾವೀಗ ‘AFRO ಟಪಾಂಗ್’ ಮೇಕಿಂಗ್ ಮೂಲಕ ಸದ್ದು ಮಾಡುತ್ತಿದೆ.
ಉಗಾಂಡದ ಹೆಸರಾಂತ ನೃತ್ಯ ತಂಡ ಜಿಟೊ ಕಿಡ್ಸ್ ಇದೇ ಮೊದಲ ಬಾರಿಗೆ ಈ ಹಾಡಿನ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದು ಅವರ ಮೊದಲ ಭಾರತೀಯ ಸಿನಿಮಾ ಪ್ರಾಜೆಕ್ಟ್ ಆಗಿದೆ. ಎಂ.ಸಿ.ಬಿಜ್ಜು ಹಾಡಿಗೆ ಸಾಹಿತ್ಯ ಬರೆದು ಹಾಡಿದ್ದರೆ, ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಹಾಲಿವುಡ್ ಪ್ರಾಜೆಕ್ಟ್ಗಳಿಗೆ VFX ಮಾಡಿರುವ ಕೆನಡಾದ ಪ್ರತಿಷ್ಠಿತ “MARZ” ಸಂಸ್ಥೆ ಈ ಚಿತ್ರಕ್ಕೆ ವಿ.ಎಫ್.ಎಕ್ಸ್ ಒದಗಿಸಿದೆ. ಹಾಲಿವುಡ್ನ ಖ್ಯಾತ ತಂತ್ರಜ್ಞರಿಂದ ಸಿಜಿ ವರ್ಕ್ ನಡೆದಿದ್ದು, ಭಾರತದಲ್ಲೇ ಅತಿ ಹೆಚ್ಚು ಸಿಜಿ ( VFX) ಅಳವಡಿಸಿರುವ ಸಿನಿಮಾ ಇದಾಗಿದೆ. ಡಿ.25ಕ್ಕೆ ಈ ಬಹುನಿರೀಕ್ಷಿತ ಚಿತ್ರ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ : ದೇವಸ್ಥಾನದ ಮುಂದೆ ಮಂಗಳಮುಖಿಯರ ಫೈಟ್ – ವಿಡಿಯೋ ವೈರಲ್!







