ಟ್ರಾಫಿಕ್ ಫೈನ್ 50% ಡಿಸ್ಕೌಂಟ್​ಗೆ ಭರ್ಜರಿ ರೆಸ್ಪಾನ್ಸ್ – ಒಂದೇ ವಾರದಲ್ಲಿ 5 ಕೋಟಿಗೂ ಹೆಚ್ಚು ದಂಡ ಸಂಗ್ರಹ!

ಬೆಂಗಳೂರು : ರಾಜ್ಯ ಸರ್ಕಾರವು ನ.21ರಿಂದ ಡಿ.12 ರವರೆಗೆ ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಶೇ.50 ರಿಯಾಯಿತಿ ನೀಡಿದ್ದು, ಒಂದೇ ವಾರದಲ್ಲಿ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ವಿಶೇಷ ಯೋಜನೆಯ ಮೂಲಕ ಸಂಚಾರಿ ಪೊಲೀಸರು ಇದುವರೆಗೂ 5 ಕೋಟಿಗೂ ಹೆಚ್ಚು ದಂಡ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಒಟ್ಟು 21 ದಿನಗಳ ಕಾಲ ದಂಡ ಪಾವತಿಸಲು ಇಲಾಖೆ ರಿಯಾಯಿತಿ ನೀಡಿದೆ. ರಿಯಾಯಿತಿ ಘೋಷಣೆಯಾದ ಒಂದೇ ವಾರದಲ್ಲಿ ಸಂಚಾರಿ ಪೊಲೀಸರು ₹5,98,28,800 ರೂಪಾಯಿಗಳ ಬೃಹತ್ ದಂಡವನ್ನು ಸಂಗ್ರಹಿಸಿದ್ದಾರೆ. ಕಳೆದೊಂದು ವಾರದಲ್ಲಿ ಲಕ್ಷಾಂತರ ವಾಹನ ಸವಾರರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಮೇಲಿನ ಬಾಕಿ ದಂಡವನ್ನು ಪಾವತಿಸಿದ್ದಾರೆ. ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆಯನ್ನು ಗಮನಿಸಿದರೆ, ಈ 21 ದಿನಗಳ ಅವಧಿಯಲ್ಲಿ ಇನ್ನೂ ಹೆಚ್ಚಿನ ಮೊತ್ತ ಸಂಗ್ರಹವಾಗುವ ನಿರೀಕ್ಷೆ ಇದೆ.

ಬಾಕಿ ಇರುವ ಸಂಚಾರ ದಂಡವನ್ನು ಹೊಂದಿರುವ ವಾಹನ ಸವಾರರು ಶೇ. 50ರಷ್ಟು ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಡಿಸೆಂಬರ್ 12 ರವರೆಗೆ ಮಾತ್ರ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ದಂಡದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಈ ರಿಯಾಯಿತಿ ಯೋಜನೆಯು ಸಾರ್ವಜನಿಕರಿಗೆ ತಮ್ಮ ಬಾಕಿ ದಂಡವನ್ನು ಕಡಿತ ಪ್ರಮಾಣದಲ್ಲಿ ಪಾವತಿಸಲು ಸಹಾಯ ಮಾಡುತ್ತದೆ. ಈ ಮೂಲಕ ಭವಿಷ್ಯದ ದಂಡದ ಭಾರ ತಪ್ಪಿಸಿಕೊಳ್ಳಬಹುದು. ಜೊತೆಗೆ, ಸಂಚಾರ ನಿಯಮ ಪಾಲನೆಗೆ ಸಹ ಜಾಗೃತಿ ಮೂಡಿಸುತ್ತದೆ. ಯೋಜನೆಯ ಪರಿಣಾಮದಿಂದ ವಾಹನ ಸವಾರರು ತಮ್ಮ ಜವಾಬ್ದಾರಿಯನ್ನು ಅರಿತು, ನಿಯಮ ಪಾಲನೆಯತ್ತ ಗಮನ ಹರಿಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಲಾಕಪ್ ಡೆತ್? ಪೊಲೀಸರ ಹಲ್ಲೆ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಆರೋಪ!

Btv Kannada
Author: Btv Kannada

Read More