ಬೆಂಗಳೂರು : ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ. ಕಸ್ಟಡಿಯಲ್ಲಿದ್ದ ವ್ಯಕ್ತಿ ಮೇಲೆ ಪೊಲೀಸರು ಗಂಭೀರವಾಗಿ ಹಲ್ಲೆ ಮಾಡಿ, ರಿಹ್ಯಾಬ್ ಸೆಂಟರ್‌ಗೆ ಹಾಕಿದ್ದರು. ಪೊಲೀಸ್ ಠಾಣೆಯಲ್ಲಿಯೇ ಅರೆಜೀವವಾಗಿದ್ದ ಸಿಂಗಮಲೆ ಎಂಬ ವ್ಯಕ್ತಿ ರಿಹ್ಯಾಬ್ ಸೆಂಟರ್ನಲ್ಲಿ ಸಾವನ್ನಪ್ಪಿದ್ದಾನೆ.
ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಿಹ್ಯಾಬ್ನಲ್ಲಿ ಆರೋಪಿ ಸಾವನ್ನಪ್ಪಿದ್ದು, ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ನವೆಂಬರ್ ತಿಂಗಳ 15 ರಂದು ವಿವೇಕನಗರ ಪೊಲೀಸ್ ಠಾಣೆಗೆ ಕರೆತರಲಾಗಿದ್ದ ಸಿಂಗಮಲೈ ಎಂಬ ವ್ಯಕ್ತಿ ಸಾವಿನ ಪ್ರಕರಣವು ಇದೀಗ ಗಂಭೀರ ತಿರುವು ಪಡೆದುಕೊಂಡಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸರು ಸಿಂಗಮಲೈ ಅವರನ್ನು ಠಾಣೆಗೆ ಕರೆತಂದಿದ್ದು, ಯಾವುದೇ ಪ್ರಕರಣ ದಾಖಲಿಸದೆ ಎರಡು ದಿನಗಳ ಕಾಲ ಕಸ್ಟಡಿಯಲ್ಲಿ ಇಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿದ ಬಳಿಕ ಅವರನ್ನು ಮಾದನಾಯಕನಹಳ್ಳಿ ಸಮೀಪದ ರಿಹ್ಯಾಬ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಮೊನ್ನೆ ಸಿಂಗಮಲೈ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭವಾಗಿದೆ. ವಿವೇಕನಗರ ಠಾಣೆ ಪೊಲೀಸ್ರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಕಡಲನಗರಿ ಉಡುಪಿಗೆ ಇಂದು ಪ್ರಧಾನಿ ಮೋದಿ ಭೇಟಿ – ನಮೋ ಸ್ವಾಗತಕ್ಕೆ ಭರ್ಜರಿ ಸಜ್ಜು!







