ಬೆಳಗಾವಿ : ಚಿಕ್ಕೋಡಿ ನಗರದಲ್ಲಿ KSRTC ಬಸ್ ಚಾಲಕನ ನಿರ್ಲಕ್ಷ್ಯದಿಂದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಿಕ್ಕೋಡಿ-ಯಡೂರು ಮಾರ್ಗದ ಬಸ್ ಇಂದಿರಾನಗರ ಕ್ರಾಸ್ ಬಳಿ ನಿಲ್ದಾಣದಿಂದ ಅತಿ ವೇಗವಾಗಿ ಹೊರಟು, ಮುಂದೆ ಹೋಗುತ್ತಿದ್ದ ಬೊಲೆರೋ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆಯ ಮಧ್ಯಭಾಗದಲ್ಲಿದ್ದ ಡಿವೈಡರ್ ಮೇಲೆ ಹತ್ತಿ ನಿಂತಿದೆ. ಅದೃಷ್ಟವಶಾತ್, ಯಾವುದೇ ದೊಡ್ಡ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಭಯಭೀತರಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯವು ಸ್ಥಳೀಯ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಪಂಚಾಯಿತಿ ಕಟ್ಟಡ ಹರಾಜು ಗಲಾಟೆ – ಕೈ ಕೈ ಮಿಲಾಯಿಸಿದ ಗ್ರಾಮಸ್ಥರು, ಪಿಡಿಒ ವಿರುದ್ಧ ಆಕ್ರೋಶ!
Author: Btv Kannada
Post Views: 243







