ನೆಲಮಂಗಲ : ನೆಲಮಂಗಲದ ಹೊನ್ನಸಂದ್ರ ಗ್ರಾಮದಲ್ಲಿ ಹಳೆಯ ಗ್ರೂಪ್ ಪಂಚಾಯಿತಿ ಕಟ್ಟಡದ ಹರಾಜು ಪ್ರಕ್ರಿಯೆಯು ತೀವ್ರ ಗೊಂದಲಕ್ಕೆ ಕಾರಣವಾಗಿ ಗ್ರಾಮಸ್ಥರು ಪರಸ್ಪರ ಕೈ ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ. ಹರಾಜು ಪ್ರಕ್ರಿಯೆಯಲ್ಲಿನ ಅವ್ಯವಹಾರ ಮತ್ತು ಕಟ್ಟಡವನ್ನು ಹರಾಜಿಗೂ ಮುನ್ನ ನೆಲಸಮಗೊಳಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಸಂದ್ರ ಗ್ರಾಮದ ಹಳೆಯ ಗ್ರೂಪ್ ಪಂಚಾಯಿತಿ ಕಟ್ಟಡದ ಹರಾಜು ಪ್ರಕ್ರಿಯೆ ವೇಳೆ ಗ್ರಾಮಸ್ಥರು ಎರಡು ಗುಂಪುಗಳಾಗಿ ಪರಸ್ಪರ ಕೈ ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಕಟ್ಟಡವನ್ನು ಕಾನೂನುಬದ್ಧವಾಗಿ ಹರಾಜು ಮಾಡದೆಯೇ ಹೊಸ ನಿರ್ಮಾಣ ಕಾರ್ಯಕ್ಕೆ ಮುಂದಾಗಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಕಟ್ಟಡದ ವಿಷಯದಲ್ಲಿ, ಪಿಡಿಒ ಅಭಿಲಾಷ್ ಅವರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರಾಜಿಗೂ ಮೊದಲೇ ಕಟ್ಟಡವನ್ನು ನೆಲಸಮಗೊಳಿಸಿದ್ದು, ಸರ್ಕಾರದ ಹಣವನ್ನು ಕಬಳಿಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದೂರಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ, ಪಂಚಾಯತಿ ಅಧ್ಯಕ್ಷರಾದ ರಾಹುಲ್ ಗೌಡ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಘಟನೆಯ ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ರಾಹುಲ್ ಗೌಡ ಅವರು, ಗ್ರಾಮಸ್ಥರ ಆಕ್ರೋಶವನ್ನು ಆಲಿಸಿ ಶಾಂತಗೊಳಿಸಿದರು. ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ – ಕೊಲೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!







