ಮೈಸೂರು : ಯುವಕನೋರ್ವನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಶಾಂತಿ ನಗರದಲ್ಲಿ ನಡೆದಿದೆ. 19 ವರ್ಷದ ಸಯ್ಯದ್ ಸೂಫಿಯಾನ್ ಕೊಲೆಯಾದ ಯುವಕ.

ಮುಂಜಾನೆ 5.40ರ ಸುಮಾರಿಗೆ ಟೀ ಕುಡಿಯಲು ಬಂದಿದ್ದ ಸೂಫಿಯಾನ್‌ನನ್ನು ಮದ್ಯ ವ್ಯಸನಿಗಳಾದ ಆತನ ಇಬ್ಬರು ಸ್ನೇಹಿತರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ರಸ್ತೆಯಲ್ಲಿ ಓಡಾಡಿಸಿಕೊಂಡು ಚುಚ್ಚಿರುವ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೊಲೆ ನಡೆಯುವ ವೇಳೆ ಯುವಕ ಸಹಾಯಕ್ಕೆ ಮೊರೆ ಇಟ್ಟರೂ, ಯಾವೊಬ್ಬ ನಾಗರೀಕರೂ ನೆರವು ನೀಡಿಲ್ಲ. ರಕ್ತದ ಮಡುವಿನಲ್ಲಿ ನರಳಾಡಿ ಕೊನೆಯುಸಿರೆಳೆದ ಸಯ್ಯದ್ ಸೂಫಿಯಾನ್ ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಶಂಕಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್ – ಮೊದಲ ಪೋಕ್ಸೋ ಪ್ರಕರಣದಲ್ಲಿ ನಿರ್ದೋಷಿ!
Author: Btv Kannada
Post Views: 279







