ಚಿತ್ತಾಪುರದಲ್ಲಿ RSS ಪಥಸಂಚಲನ ಯಶಸ್ವಿ- ಖರ್ಗೆ ತವರಿನಲ್ಲಿ ಭಗವಾ ಧ್ವಜ ಹಾರಿಸಿದ RSS ಕಾರ್ಯಕರ್ತರು!

ಚಿತ್ತಾಪುರ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲ ಚಿತ್ತಾಪುರದಲ್ಲಿ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸಿದ್ದ ಪಥಸಂಚಲನ ಯಶಸ್ವಿಯಾಗಿ ನೆರವೇರಿತು. ಸುಮಾರು 300ಕ್ಕೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಈ ಪಥಸಂಚಲನವು ಚಿತ್ತಾಪುರದ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪಗಾವಲು ಒದಗಿಸಲಾಗಿತ್ತು.

ಪಥಸಂಚಲನವು ನಗರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭಗೊಂಡು ಪ್ರಮುಖ ರಸ್ತೆಗಳಾದ ಬಸ್ ನಿಲ್ದಾಣ, ಅಂಬೇಡ್ಕರ್ ಸರ್ಕಲ್, ಕೆನರಾ ಬ್ಯಾಂಕ್ ವೃತ್ತದ ಮೂಲಕ ಮತ್ತೆ ಕಲ್ಯಾಣ ಮಂಟಪದತ್ತ ಸಾಗಿತು. ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಸಾರ್ವಜನಿಕರಿಂದ, ಅನೇಕ ಮಹಿಳೆಯರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಸಂಚಲನದ ಮೇಲೆ ಪುಷ್ಪಾರ್ಚನೆ  ಮಾಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕರ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆಗಳನ್ನು ಕೂಗಿದರು.

ಖರ್ಗೆ ಅವರ ತವರು ನೆಲದಲ್ಲಿ ಕೇಸರಿ ಧ್ವಜವನ್ನು ಹಾರಿಸಿ, RSS ಕಾರ್ಯಕರ್ತರು ಶಿಸ್ತುಬದ್ಧವಾಗಿ ಮತ್ತು ಯಾವುದೇ ಅಡಚಣೆಯಿಲ್ಲದೆ ತಮ್ಮ ಪಥಸಂಚಲನವನ್ನು ಯಶಸ್ವಿಗೊಳಿಸಿದರು.

ಇದನ್ನೂ ಓದಿ : ಕಿಚ್ಚನ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾ 2026ರ ಜ.15ಕ್ಕೆ ರಿಲೀಸ್!

Btv Kannada
Author: Btv Kannada

Read More