ಕಲಬುರಗಿ : ಸ್ನೇಹಿತರೊಂದಿಗೆ ‘ಎಣ್ಣೆ ಪಾರ್ಟಿ’ ಮಾಡುತ್ತಿದ್ದಾಗಲೇ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿರುವ ಘಟನೆ.

ಕಲಬುರಗಿ ನಗರದ ವಿಜಯನಗರ ಬಡಾವಣೆಯ 32 ವರ್ಷದ ರಿತೇಶ್ ಎಂಬ ಯುವಕನನ್ನು ಕಲ್ಲಿನಿಂದ ಜಜ್ಜಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಸ್ನೇಹಿತರ ಗುಂಪು ಒಟ್ಟಿಗೆ ಕುಳಿತು ಪಾರ್ಟಿ ಮಾಡುತ್ತಿದ್ದಾಗಲೇ ವೈಯಕ್ತಿಕ ದ್ವೇಷ ಅಥವಾ ಹಳೆ ವೈಷಮ್ಯದ ಕಾರಣಕ್ಕೆ ಈ ಕೃತ್ಯ ನಡೆದಿದೆ. ಹತ್ಯೆ ಮಾಡಿದವರು ಕೊಲೆಯಾದ ರಿತೇಶ್‌ನ ಸ್ನೇಹಿತರು, ಈ ಸಂಬಂಧ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಘಟನೆ ವಿಜಯನಗರ ಬಡಾವಣೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಸ್ಥಳೀಯರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ, ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Btv Kannada
Post Views: 285







