‘ತ್ರಿಬಲ್’ ರೈಡಿಂಗ್​ ಹೊರಟ ಸುಂದರಿಗೆ ‘ಮೂವರು’ ಗಂಡಂದಿರು – ಹೆಂಡ್ತಿ ಮಿಸ್ಸಿಂಗ್ ಅಂತಾ ದೂರು ಕೊಟ್ಟಾಗ ಮದುವೆ ಪುರಾಣ ರಿವೀಲ್!

ಬೆಂಗಳೂರು : ಬೆಂಗಳೂರಿನಲ್ಲಿರುವ ಐನಾತಿ ಸುಂದರಿಯೊಬ್ಬಳು ಮದುವೆಯಾಗುವುದನ್ನೇ ತನ್ನ ಜೀವನದ ಖಯಾಲಿ ಮಾಡಿಕೊಂಡಿದ್ದಾಳೆ. ‘ಸಿತಾರ’ ಎಂಬಾಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾಳೆ. ವರ್ಷಕ್ಕೊಮ್ಮೆ ಗಂಡನನ್ನು ಬದಲಾಯಿಸುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾಳೆ.

ಕಳೆದ 2024ರಲ್ಲಿ ಜಶ್ವಂತ್ ಎಂಬಾತನನ್ನು ವಿವಾಹವಾಗಿದ್ದ ಸಿತಾರ, ಆ ಮದುವೆಗೂ ಮುನ್ನವೇ ಮತ್ತೊಬ್ಬನನ್ನು ಮದುವೆಯಾಗಿದ್ದಳು ಎನ್ನಲಾಗ್ತಿದೆ. ಇತ್ತೀಚೆಗೆ ದಸರಾ ಹಬ್ಬದ ನೆಪ ಹೇಳಿ ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಹಲವು ದಿನಗಳ ಬಳಿಕ ಗಂಡನ ಮನೆಗೆ ಮರಳಿಲ್ಲ.

ಪತ್ನಿ ಸಿತಾರಾ ಕಾಣೆಯಾಗಿರುವ ಬಗ್ಗೆ ಕೇಸ್ ದಾಖಲಿಸಲು ಮುಂದಾಗಿದ್ದ ಪತಿ ಜಶ್ವಂತ್‌ಗೆ ಆಕೆ 3ನೇ ವ್ಯಕ್ತಿಯೊಂದಿಗೆ ಮತ್ತೊಂದು ಮದುವೆಯಾಗಿರುವ ಆಘಾತಕಾರಿ ಸತ್ಯ ತಿಳಿದಿದೆ. ಹಳೇ ಗಂಡನಿಗೆ ಬೈ.. ಬೈ ಹೇಳಿ ಹೊಸ ಗಂಡನಿಗೆ ಹಾಯ್.. ಹಾಯ್ ಎನ್ನುವುದು ಈಕೆಯ ಚಾಳಿ ಎನ್ನಲಾಗಿದೆ.

ಈ ‘ತ್ರಿಬಲ್ ರೈಡಿಂಗ್’ ಕಹಾನಿ ಬೆಂಗಳೂರಿನಲ್ಲಿ ನಡೆದಿದ್ದು ಸದ್ಯ ಈ ‘ಖತರ್ನಾಕ್ ಲೇಡಿ’ಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ನೆಲಮಂಗಲದಲ್ಲಿ ಮತ್ತೆ ಶುರುವಾಯ್ತಾ ‘ಎಲೆಕ್ಷನ್’​ ವಾರ್ ? – ಗ್ರಾ. ಪಂ ಸದಸ್ಯ ಸಲೀಂ ಮೇಲೆ ರೌಡಿಶೀಟರ್ ಮುಬಾರಕ್ ಫೈರಿಂಗ್!

Btv Kannada
Author: Btv Kannada

Read More