ಮೈಸೂರು : ಕೆ.ಆರ್.ನಗರ ಶಾಸಕ ರವಿಶಂಕರ್ ಬಲಗೈ ಭಂಟ ಲೋಹಿತ್ ಸದಾಶಿವಪ್ಪನ ಕಾಮದಾಟ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಮಾಯಿಗೌಡನಹಳ್ಳಿ ಗ್ರಾಮದ ಸೋಮೇಗೌಡ ಎಂಬುವವರು ದೂರು ನೀಡಿದ್ದು, ಲೋಹಿತ್ ಸದಾಶಿವಪ್ಪ @ ರಾಜಿ ಎಂಬಾತನ ವಿರುದ್ಧ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಬಗ್ಗೆ ಬಿಟಿವಿ ವರದಿ ಮಾಡಿತ್ತು, ಬಿಟಿವಿಯಲ್ಲಿ ಕೈ ನಾಯಕನ ಕಾಮದಾಟ ಬಯಲಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.

ಇದೀಗ ಆರೋಪಿ ಲೋಹಿತ್ನನ್ನು ಕೆ.ಆರ್. ನಗರದಲ್ಲೇ ಪೊಲೀಸರು ಬಂಧಿಸಿದ್ದಾರೆ. ಹಾಡ್ಯ ಗ್ರಾಮದ ಯುವತಿ ಜೊತೆ ಲೋಹಿತ್ ಕಾಮದಾಟ ನಡೆಸಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ.

ಸೆಕ್ಸ್ ವಿಡಿಯೋ ಕೇಸ್ ದಾಖಲಾಗುತ್ತಿದ್ದಂತೆ ಕೈ ಮುಖಂಡ ಎಸ್ಕೇಪ್ ಆಗಿದ್ದು, ಫಾರಂ ಹೌಸ್ ಒಂದರಲ್ಲಿ ಅವಿತುಕೊಂಡಿದ್ದ. ಇದೀಗ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.


ಇದನ್ನೂ ಓದಿ : ಕಾನೂನು ಪ್ರಾಧಿಕಾರ ಅಧಿಕಾರಿಗಳಿಂದ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ರಿವೀಲ್ ಆಯ್ತು ದರ್ಶನ್ ಕಳ್ಳಾಟ!
Author: Btv Kannada
Post Views: 672







