ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ‘ಕನ್ನಡ ಹಾಡು’ ಕೇಳಿದ್ದಕ್ಕೆ ಹಲ್ಲೆ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ. ಮಾರತ್ತಹಳ್ಳಿಯ ‘ಸೈಡ್ ವಾಕ್’ ಎಂಬ ಪಬ್‌ನಲ್ಲಿ ಈ ಘಟನೆ ನಡೆದಿದೆ.

ಕಾರ್ತಿಕ್ ಮತ್ತು ಅವರ ಸ್ನೇಹಿತರು ನಿನ್ನೆ ರಾತ್ರಿ ಸೈಡ್ ವಾಕ್ ಪಬ್‌ಗೆ ತೆರಳಿದ್ದರು. ಪಬ್‌ನಲ್ಲಿ ಅವರು ಕನ್ನಡ ಹಾಡುಗಳನ್ನು ಹಾಕುವಂತೆ ಕೇಳಿಕೊಂಡಿದ್ದಾರೆ. ಆದರೆ, ಕನ್ನಡ ಹಾಡು ಹಾಕುವಂತೆ ಒತ್ತಾಯಿಸಿದಕ್ಕೆ ಪಬ್ ಸಿಬ್ಬಂದಿ ಮತ್ತು ಬೌನ್ಸರ್‌ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರ್ತಿಕ್ ಆರೋಪಿಸಿದ್ದಾರೆ. ಹಲ್ಲೆ ನಡೆಯುವ ಸಂದರ್ಭದಲ್ಲಿ ಕಾರ್ತಿಕ್ ಪಬ್‌ನ ಒಳ ಭಾಗದಲ್ಲಿಯೇ ವಿಡಿಯೋ ಮಾಡಿದ್ದಾರೆ. ಪಬ್ ಮ್ಯಾನೇಜ್‌ಮೆಂಟ್‌ನ ಸೂಚನೆ ಮೇರೆಗೆ ಬೌನ್ಸರ್‌ಗಳು ಈ ಹಲ್ಲೆಯನ್ನು ನಡೆಸಿದ್ದಾರೆ ಎಂದು ಕಾರ್ತಿಕ್ ಆರೋಪ ಮಾಡಿದ್ದಾರೆ.

ಈ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದು ಕನ್ನಡ ಪರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಪಬ್‌ಗಳಲ್ಲಿ ಕನ್ನಡ ಹಾಡಿಗೆ ಅವಕಾಶ ನೀಡದಿರುವುದು ಮತ್ತು ಕೇಳಿದವರ ಮೇಲೆ ಹಲ್ಲೆ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಲೇ ಇದೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ – ಮಾಜಿ ಸೈನಿಕನಿಗೆ ಗಂಭೀರ ಗಾಯ!







