ಬೆಂಗಳೂರು : ಸಿಲಿಂಡರ್ ಸ್ಫೋಟಗೊಂಡು ಮಾಜಿ ಸೈನಿಕರೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಗರದ ಅಂದ್ರಹಳ್ಳಿ ಸಮೀಪದ ಬ್ಯಾಡರಹಳ್ಳಿಯ ವಿದ್ಯಾಮಾನ್ಯನಗರದಲ್ಲಿ ನಡೆದಿದೆ.

ಮಾಜಿ ಸೈನಿಕ ಜನಾರ್ದನ್ ಅವರು ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಜನಾರ್ದನ್ ಅವರು ವಾಸವಿದ್ದ ಮನೆಯಲ್ಲಿ ನಿನ್ನೆ ರಾತ್ರಿ ಸಿಲಿಂಡರ್ ಸೋರಿಕೆಯಾಗಿತ್ತು. ಇಂದು ಬೆಳಗ್ಗೆ ಜನಾರ್ದನ್ ಲೈಟ್ ಸ್ವಿಚ್ ಹಾಕುತ್ತಿದ್ದಂತೆ ಅನಿಲದ ಒತ್ತಡಕ್ಕೆ ಸಿಲಿಂಡರ್ ಸ್ಫೋಟಗೊಂಡಿದೆ. ಬ್ಲಾಸ್ಟ್ನ ತೀವ್ರತೆಗೆ ಇಡೀ ಮನೆಯ ಗೋಡೆಗಳು ನುಚ್ಚು ನೂರಾಗಿದೆ.

ಇನ್ನು ಈ ಘಟನೆಯಲ್ಲಿ ಜನಾರ್ದನ್ ಸ್ಥಿತಿ ಗಂಭೀರವಾಗಿದ್ದು, ಸದ್ಯ ಮಾಜಿ ಸೈನಿಕ ಜನಾರ್ದನ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ : ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಕೇಸ್ – ಆರೋಪಿ ವಿಘ್ನೇಶ್ ಸೇರಿ ಇಬ್ಬರು ಅರೆಸ್ಟ್!
Author: Btv Kannada
Post Views: 207







