ಕರ್ನಾಟಕದ ಪ್ರತಿಷ್ಠಿತ ಮತ್ತು ಹೆಮ್ಮೆಯ ನಂದಿನಿ ಬ್ರ್ಯಾಂಡ್ ದೀಪಾವಳಿ ಪ್ರಯುಕ್ತ ಹೊಸ ಸಕ್ಕರೆ ರಹಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಕ್ಕರೆ ರಹಿತ ನಂದಿನಿ ಖೋವಾ ಗುಲಾಬ್ ಜಾಮೂನ್, ನಂದಿನಿ ಹಾಲಿನ ಪೇಡಾ, ನಂದಿನಿ ಬೆಲ್ಲದ ಓಟ್ಸ್ ಆ್ಯಂಡ್ ನಟ್ಸ್ ಬರ್ಫಿಯನ್ನು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಕಾಸ ಸೌಧದಲ್ಲಿ ಬುಧವಾರ ಬಿಡುಗಡೆಗೊಳಿಸಿದರು. ಈ ಬಗ್ಗೆ ಕೆಎಂಎಫ್ ಮಾಹಿತಿ ನೀಡಿದೆ.

ಕರ್ನಾಟಕ ಹಾಲು ಮಹಾಮಂಡಳಿಯು ಕಳೆದ 5 ದಶಕಗಳಿಂದ ʼನಂದಿನಿʼ ಬ್ರ್ಯಾಂಡ್ ಮೂಲಕ ರಾಜ್ಯ ಮತ್ತು ಹೊರ ರಾಜ್ಯದ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಪರಿಶುದ್ಧ ಮತ್ತು ರುಚಿಕರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುತ್ತಿದೆ. ನಂದಿನಿ ಬ್ರ್ಯಾಂಡ್ ಮೂಲಕ ಈಗಾಗಲೇ 175ಕ್ಕೂ ಅಧಿಕ ಮಾದರಿಯ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ.
2025 ರ ದಸರಾ ಹಬ್ಬದ ಸಂದರ್ಭದಲ್ಲಿ ನಂದಿನಿ ಸಿಹಿಗಳ ಮಾರಾಟವು 750 ಮೆ.ಟನ್‌ಗಳನ್ನು ದಾಟಿದ್ದು ಈ ಯಶಸ್ಸು ನಂದಿನಿ ಬ್ಯಾಂಡ್ ಶುದ್ಧತೆ, ಗುಣಮಟ್ಟ ಮತ್ತು ವಿಶ್ವಾಸದ ಪ್ರತೀಕವಾಗಿದ್ದು, ಗ್ರಾಹಕರ ನಂಬಿಕೆಯ ಪ್ರತಿಫಲವಾಗಿದೆ.

ಇಂದಿನ ಆರೋಗ್ಯ ಜಾಗೃತ ಯುಗದಲ್ಲಿ ಗ್ರಾಹಕರು ಸಕ್ಕರೆ ರಹಿತ -No added sugar ಸಿಹಿಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಇವು ಮಧುಮೇಹಿಗಳಿಗೆ ಅನುಕೂಲಕರವಾಗಿದ್ದು, ತೂಕ ನಿಯಂತ್ರಣಕ್ಕೆ ಸಹಕಾರಿ ಹಾಗೂ ಹಲ್ಲುಗಳ ಆರೈಕೆಗೆ ಉತ್ತಮ, ಸಕ್ಕರೆಯಿಲ್ಲದಿದ್ದರೂ ಸಹ ಸಹಜ ಸಿಹಿತನ ಮತ್ತು ರುಚಿಯನ್ನು ಕಾಪಾಡಿಕೊಳ್ಳುವ ಈ ಸಿಹಿಗಳು ಆರೋಗ್ಯಕರ ಆಯ್ಕೆಯಾಗಿ ಜನಪ್ರಿಯತೆ ಪಡೆಯುತ್ತಿವೆ.
ಈ ಹಿನ್ನೆಲೆಯೊಂದಿಗೆ ಗ್ರಾಹಕರ ಆಸಕ್ತಿಯನ್ನು ಸಹ ಗಮನದಲ್ಲಿಟ್ಟುಕೊಂಡು, ಕರ್ನಾಟಕ ಹಾಲು ಮಹಾಮಂಡಳಿಯು ಗ್ರಾಹಕರಿಗೆ ಹೊಸ ವೈವಿಧ್ಯಮಯ ಈ ಕೆಳಕಂಡ ಸಕ್ಕರೆ ರಹಿತ -No added sugar ಸಿಹಿಗಳನ್ನು ನಂದಿನಿ ಬ್ಯಾಂಡ್ ಅಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧಪಡಿಸಿದೆ.
ಉತ್ಪನ್ನಗಳ ವಿವರ:
- “ನಂದಿನಿ ಖೋವಾ ಗುಲಾಬ್ ಜಾಮೂನ್” (ಸಕ್ಕರೆ ರಹಿತ – No added sugar) 500 ಗ್ರಾಂ ಪ್ಯಾಕ್‌ನ ದರ ರೂ.220
- ಎಲ್ಲರ ಮೆಚ್ಚಿನ ಪರಿಶುದ್ಧ “ನಂದಿನಿ ಹಾಲಿನ ಪೇಡಾ” (ಸಕ್ಕರೆ ರಹಿತ – No added sugar) 200 ಗ್ರಾಂ ಪ್ಯಾಕ್‌ನ ದರ ರೂ.170
- ರುಚಿಯ ಸಮ್ಮಿಲನವಾಗಿರುವ “ನಂದಿನಿ ಬೆಲ್ಲದ ಓಟ್ಸ್ ಅಂಡ್ ನಟ್ಸ್ ಬರ್ಫಿ” (ಬೆಲ್ಲದಿಂದ ತಯಾರಿಸಲಾದ ಸಿಹಿ) – 200ಗ್ರಾಂ ಪ್ಯಾಕ್‌ನ ದರ – ರೂ.170
ಇದನ್ನೂ ಓದಿ : ಆಳಂದ ಮತಗಳ್ಳತನ ಕೇಸ್ – ಕಲಬುರಗಿ ಜಿಲ್ಲೆಯ ಐದು ಕಡೆ SIT ದಾಳಿ.. ಹಲವರು ವಶಕ್ಕೆ!







