ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಈ ಹಿಂದೆ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ 2019ರಲ್ಲಿ ಪರಸ್ಪರ ಡಿವೋರ್ಸ್ ಪಡೆದು ದೂರಾಗಿದ್ದರು. ಆರು ವರ್ಷಗಳ ಬಳಿಕ ರಘು ದೀಕ್ಷಿತ್ ಎರಡನೇ ಮದುವೆಗೆ ನಿರ್ಧರಿಸಿದ್ದು, ಇದೀಗ ಖ್ಯಾತ ಗಾಯಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವುದು ಫಿಕ್ಸ್ ಆಗಿದೆ.
ಕನ್ನಡದ ಖ್ಯಾತ ಗಾಯಕಿ ಹಾಗೂ ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ರಘು ದೀಕ್ಷಿತ್ ಎರಡನೇ ಮದುವೆ ಆಗಲಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಇಬ್ಬರ ಮದುವೆ ಸಮಾರಂಭ ನಿಶ್ಚಯವಾಗಿದೆ. ರಘು ಹಾಗೂ ವಾರಿಜಶ್ರೀ ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ವಾರಿಜಶ್ರೀ ವೇಣುಗೋಪಾಲ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿಯಾಗಿದ್ದು, ಕೊಳಲು ವಾದಕಿ ಕೂಡ ಹೌದು. ಮೂಲತಃ ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ರಘು ದೀಕ್ಷಿತ್ ಅವರೊಂದಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಅವರು ಸಾಕಷ್ಟು ಆಲ್ಬಂಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಇನ್ಮುಂದೆ ಹಿಂದಿ ಬೋರ್ಡ್ ಹಾಕಂಗಿಲ್ಲ, ಹಿಂದಿ ಹಾಡು ಕೇಳಂಗಿಲ್ಲ!







