ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ಸಮರ ಸಾರಿದ್ದು, ಇನ್ಮುಂದೆ ತಮಿಳುನಾಡಿನಲ್ಲಿ ಹಿಂದಿ ಬೋರ್ಡ್ ಹಾಕಂಗಿಲ್ಲ ಹಿಂದಿ ಹಾಡು ಕೇಳಂಗಿಲ್ಲ ಎಂದು ಹೊಸ ಮಸೂದೆ ಮಂಡನೆಗೆ ತಯಾರಿ ನಡೆಸಿದೆ.
ತಮಿಳುನಾಡಿನಾದ್ಯಂತ ಹಿಂದಿ ಬೋರ್ಡ್‌ಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನ ನಿಷೇಧಿಸುವ ಹೊಸ ಮಸೂದೆ ಮಂಡನೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ಮಂಗಳವಾರ ರಾತ್ರಿ ಕೂಡ ಮಸೂದೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳು ಈ ಕ್ರಮವು ಸಂವಿಧಾನಕ್ಕೆ ಅನುಗುಣವಾಗಿದೆ ಎಂದು ಹೇಳಿರುವುದಾಗಿ ಎಂದು ವರದಿಗಳಿಂದ ತಿಳಿದುಬಂದಿದೆ.
ಮಸೂದೆಯ ಕುರಿತು ಡಿಎಂಕೆ ಹಿರಿಯ ನಾಯಕ ಟಿಕೆಎಸ್ ಇಳಂಗೋವನ್ ಪ್ರತಿಕ್ರಿಯಿಸಿದ್ದು, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುದಿಲ್ಲ. ಸಂವಿಧಾನದ ಆಶಯವನ್ನು ಪಾಲಿಸುತ್ತೇವೆ, ಆದ್ರೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು.
ಆದಾಗ್ಯೂ ಬಿಜೆಪಿ ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನ ತೀವ್ರವಾಗಿ ವಿರೋಧಿಸಿದೆ. ಬಿಜೆಪಿಯ ವಿನೋಜ್ ಸೆಲ್ವಂ ಪ್ರತಿಕ್ರಿತಿಸಿ, ಇದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನ ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಕಿಡಿ ಕಾರಿದರು.
ಇದನ್ನೂ ಓದಿ : ಶಾಸಕ ವೀರೇಂದ್ರ ಪಪ್ಪಿಗೆ ಬಿಗ್ ಶಾಕ್ – ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!







