ಪುರಿ ಜಗನ್ನಾಥ್-ವಿಜಯ್ ಸೇತುಪತಿ ಚಿತ್ರಕ್ಕೆ ಅನಿಮಲ್ ಮ್ಯೂಸಿಕ್ ಡೈರೆಕ್ಟರ್ ಹರ್ಷವರ್ಧನ್ ರಾಮೇಶ್ವರ್ ಎಂಟ್ರಿ!

ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಪ್ರತಿಭಾನ್ವಿತ ನಟ ವಿಜಯ್ ಸೇತುಪತಿ ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ತಾರಾಬಳಗದ ಮೂಲಕ ಸುದ್ದಿಯಲ್ಲಿರುವ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಮೇಶ್ವರ್ ಎಂಟ್ರಿ ಕೊಟ್ಟಿದ್ದಾರೆ.

ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸೇರಿದಂತೆ ಅನೇಕ ಚಿತ್ರಗಳಿಗೆ ಹರ್ಷವರ್ಧನ್ ಮ್ಯೂಸಿಕ್ ಒದಗಿಸಿದ್ದಾರೆ. ಇದೀಗ ಇವರೇ ಪುರಿ ಹಾಗೂ ಸೇತುಪತಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಬಾಲಿವುಡ್ ನಟಿ ಟಬು, ದುನಿಯಾ ವಿಜಯ್, ನಟಿ ಸಂಯುಕ್ತ ಮೆನನ್‌, ಬ್ರಹ್ಮಾನಂದ್ ಹಾಗೂ ವಿಟಿವಿ ಗಣೇಶ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿ ಹಾಗೂ ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್‌ ಹಾಗೂ ಚಾರ್ಮಿ ಕೌರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಶೀಘ್ರದಲ್ಲೇ ಚಿತ್ರದ ಮತ್ತೊಂದು ಹಂತದ ಶೂಟಿಂಗ್ ಶುರುವಾಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

ಇದನ್ನೂ ಓದಿ : ದರ್ಶನ್ ನಟನೆಯ “ದಿ ಡೆವಿಲ್” ಚಿತ್ರದ “ಒಂದೆ ಒಂದು ಸಲ” ಸಾಂಗ್​ಗೆ ಫ್ಯಾನ್ಸ್​ ಫಿದಾ!

Btv Kannada
Author: Btv Kannada

Read More