ಬೆಂಗಳೂರು : ಇಂದು ಎಲ್ಲೆಡೆ ನವರಾತ್ರಿ ಆಯುಧ ಪೂಜೆ ಸಂಭ್ರಮ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಸೇರಿದಂತೆ ಅನೇಕ ಕಡೆಗಳಲ್ಲಿ, ರಾಜ್ಯದ ಹಲವೆಡೆ ಜನರ ಹೂವು, ಹಣ್ಣು, ತರಕಾರಿ ಖರೀದಿ ಭರಾಟೆ ಜೋರಾಗಿದೆ.
ಬೆಲೆ ಏರಿಕೆ ಮಧ್ಯೆ ಜನರು ಹೂವು, ಹಣ್ಣು, ತರಕಾರಿ, ಪೂಜಾ ಸಾಮಾಗ್ರಿ ಖರೀದಿಸುತ್ತಿದ್ದಾರೆ. ಕೆ.ಆರ್.ಮಾರುಕಟ್ಟೆಗೆ ಬರುವವರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಟೌನ್ ಹಾಲ್ನಿಂದ ಕೆ.ಆರ್.ಮಾರುಕಟ್ಟೆವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಫ್ಲೈಓವರ್ ಮೇಲೂ ಸಾರ್ವಜನಿಕರು ವಾಹನ ಪಾರ್ಕ್ ಮಾಡಿದ್ದಾರೆ.

ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಬೆಲೆ ಏರಿಕೆಯಾದರೂ ಹಬ್ಬರ ಸಂಭ್ರಮ ಜೋರಾಗಿ ಇದೆ. ಸೇವಂತಿ ಹೂ ಕೆಜಿಗೆ 200 ರಿಂದ 300ರೂ, ಕನಕಾಂಬರ ಕೆಜಿಗೆ 2000 ರಿಂದ 2500 ರೂ, ಮಲ್ಲಿಗೆ ಕೆಜಿಗೆ 1,500. 2000 ರೂ, ಗುಲಾಬಿ 400ರಿಂದ 450 ರೂ, ಕಾಕಡ ಕೆಜಿಗೆ 800ರೂ. ವರೆಗೂ ಮಾಡಲಾಗುತ್ತಿದೆ.
ಇನ್ನು ಬಾಳೆಕಂಬ ಜೋಡಿಗೆ 50 ರಿಂದ 70 ರೂ, ಬೂದುಕುಂಬಳಕಾಯಿ ಕೆಜಿಗೆ 40 ರಿಂದ 60 ರೂ, ಗುಲಾವಿ ಹೂವಿನ ಹಾರ 4000 ತನಕ ಮಾರಾಟ ಮಾಡಲಾಗುತ್ತಿದ್ದು, ಹೂವಿನ ಹಾರಗಳ ಬೆಲೆ ಸಾವಿರ ರೂ. ವರೆಗೂ ಮುಟ್ಟಿದೆ.
ಇದನ್ನೂ ಓದಿ : ಸಕ್ಕರೆ ನಾಡಲ್ಲಿ ಮತ್ತೆ JDS ಪರ್ವ ಶುರು – ಕೆ.ಆರ್.ಪೇಟೆಯ TAPCMS ಚುನಾವಣೆಯಲ್ಲಿ ಜಯಭೇರಿ ಬಾರಿಸಿದ MLA ಎಚ್.ಟಿ ಮಂಜು!







