ಸಕ್ಕರೆ ನಾಡಲ್ಲಿ ಮತ್ತೆ JDS ಪರ್ವ ಶುರು – ಕೆ.ಆರ್.ಪೇಟೆಯ TAPCMS ಚುನಾವಣೆಯಲ್ಲಿ ಜಯಭೇರಿ ಬಾರಿಸಿದ MLA ಎಚ್.​ಟಿ ಮಂಜು!

ಮಂಡ್ಯ : ಕೆ.ಆರ್.ಪೇಟೆಯ TAPCMS ಚುನಾವಣೆಯಲ್ಲಿ MLA ಎಚ್.​ಟಿ ಮಂಜು ಜಯಭೇರಿ ಬಾರಿಸಿದ್ದು, ಈ ಮೂಲಕ ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ JDS ಪರ್ವ ಶುರುವಾಗಿದೆ. H.T ಮಂಜು ಚುನಾವಣಾ ತಂತ್ರಕ್ಕೆ ಕಾಂಗ್ರೆಸ್​ ನಾಯಕರಿಗೆ ತೀವ್ರ ಮುಖಭಂಗವಾಗಿದೆ.

MLA ಎಚ್.​ಟಿ ಮಂಜು ಮಾಸ್ಟರ್ ಸ್ಟ್ರೋಕ್​​ಗೆ ಮಂಡ್ಯ ‘ಕೈ’ ನಾಯಕರು ಥಂಡಾ ಹೊಡೆದಿದ್ದು, ಮಂಡ್ಯ ಉಸ್ತುವಾರಿ ಸಚಿವ ಎನ್​.ಚಲುವರಾಯಸ್ವಾಮಿ, ರವಿಕುಮಾರ್ ಗೌಡ, ಕದಲೂರು ಉದಯ್ ಸೇರಿ ಘಟಾನುಘಟಿ ಕಾಂಗ್ರೆಸ್ ನಾಯಕರ ವಿರುದ್ಧ ಎಚ್.​ಟಿ ಮಂಜು ಗೆಲುವು ಸಾಧಿಸಿದ್ದಾರೆ. ಶಾಸಕ ಎಚ್.​ಟಿ ಮಂಜು ಅಭಿವೃದ್ಧಿ ಕಾರ್ಯಗಳಿಗೆ ಕೆ.ಆರ್.ಪೇಟೆ ಜನ ಅವರ ಕೈ ಹಿಡಿದಿದ್ದಾರೆ.

ಶಾಸಕ ಎಚ್.​ಟಿ ಮಂಜು ನೇತೃತ್ವದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಭರ್ಜರಿ ವರ್ಕೌಟ್ ಆಗಿದೆ. ಈಗ ಕೆ.ಆರ್.ಪೇಟೆಯ TAPCMS ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಗೆಲುವು ಸಿಕ್ಕಿದೆ. 14 ನಿರ್ದೇಶಕ ಸ್ಥಾನದ ಪೈಕಿ JDS-BJP ಬರೋಬ್ಬರಿ 11 ಸ್ಥಾನಗಳನ್ನು ಪಡೆದು, ರಾಜ್ಯ ಸರ್ಕಾರದ ವಿರುದ್ದ ಸೆಡ್ಡು ಹೊಡೆದು TAPCMS ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಕೇವಲ 3 ಸ್ಥಾನಗಳನ್ನು ಪಡೆದ ಘಟಾನುಘಟಿ ಕಾಂಗ್ರೆಸ್​ ನಾಯಕರಿಗೆ ಭಾರೀ ಮುಖಭಂಗವಾಗಿದೆ. ಖುದ್ದು ಸಚಿವ ಎನ್​ಚಲುವರಾಯಸ್ವಾಮಿ TAPCMS ಚುನಾವಣೆ ಅಖಾಡಕ್ಕಿಳಿದಿದ್ದರೂ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದೆ.

ಸಚಿವ ಚಲುವರಾಯಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ H.T ಮಂಜು ಸ್ಟ್ರಾಟಜಿ ವರ್ಕೌಟ್ ಆಗಿದ್ದು, JDS ಭದ್ರಕೋಟೆಯಲ್ಲಿ ಕೆ.ಆರ್.ಪೇಟೆ ಶಾಸಕ ಎಚ್.​ಟಿ ಮಂಜು  ಮತ್ತೆ ಗೆದ್ದು ಬೀಗಿದ್ದಾರೆ. TAPCMS ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಬಿ.ಎಲ್.ದೇವರಾಜು ಸೋತು ಸುಣ್ಣವಾಗಿದ್ದಾರೆ. ಸಹೋದರ H.T ಲೋಕೇಶ್ ಅವರನ್ನು ಗೆಲ್ಲಿಸಿಕೊಳ್ಳಲು H.T. ಮಂಜು ಯಶಸ್ವಿಯಾಗಿದ್ದಾರೆ. ಇದೀಗ ಕೆ.ಆರ್.ಪೇಟೆ ವಿಧಾನಸಭಾ ಚುನಾವಣೆಯ ಗೆಲುವಿನ ಫಲಿತಾಂಶ ಮತ್ತೆ ಮರುಕಳಿಸಿದ್ದು, ಎಚ್.​ಟಿ ಮಂಜು ವಿರುದ್ಧ ಸೋತಿದ್ದ ಕಾಂಗ್ರೆಸ್​ನ ಬಿ.ಎಲ್.ದೇವರಾಜು ಮತ್ತೆ ಸೋಲನುಭವಿಸಿದ್ದಾರೆ.

ಎನ್​.ಚಲುವರಾಯಸ್ವಾಮಿ & ಬಿ.ಎಲ್.ದೇವರಾಜು ತಂತ್ರಕ್ಕೆ H.T. ಮಂಜು ಪ್ರತಿತಂತ್ರ ಹೂಡಿ ಗೆಲುವು ಸಾಧಿಸಿದ್ದಾರೆ. TAPCMS ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಗೆಲ್ಲುತ್ತಿದ್ದಂತೆ ಸಂಭ್ರಮಾಚರಣೆ ಶುರುವಾಗಿದೆ. ಕೆ.ಆರ್.ಪೇಟೆಯಲ್ಲಿ ಪಟಾಕಿ ಸಿಡಿಸಿ ಬಿಜೆಪಿ – ಜೆಡಿಎಸ್ ಬೆಂಬಲಿಗರ ಹರ್ಷಾಚರಣೆ ನಡೆಸಿದ್ದಾರೆ. TAPCMS ಚುನಾವಣೆಯಲ್ಲಿ ಗೆದ್ದ ನಿರ್ದೇಶಕರನ್ನು ಸನ್ಮಾನಿಸಿ H.T ಮಂಜು ಶುಭ ಕೋರಿದ್ದಾರೆ. ಈ ವೇಳೆ ಸಚಿವ ಎನ್​.ಚಲುವರಾಯಸ್ವಾಮಿ & ಟೀಂ ವಿರುದ್ಧ ಶಾಸಕ ಎಚ್.​ಟಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ JDS ಮುಗಿಸಲು ಹೊರಟವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸರ್ಕಾರದ ಮಂತ್ರಿಯೇ ಬಂದು ಚುನಾವಣೆ ಮಾಡಿದ್ರೂ ಮತದಾರರು ಜೆಡಿಎಸ್ ಕೈ ಹಿಡಿದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಇನ್ನೂ ಉತ್ತಮ ಕೆಲಸಗಳು ಆಗಲಿವೆ ಎಂದು ಸನ್ಮಾನ ಸಮಾರಂಭದಲ್ಲಿ ಕ್ಷೇತ್ರದ ಮತದಾರರಿಗೆ ಶಾಸಕ ಎಚ್.​ಟಿ ಮಂಜು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಆಯುಧ ಪೂಜೆ ದಿನವೇ ಚಿತ್ರರಂಗಕ್ಕೆ ಹೊಸ ಆಯುಧ – ಸಂಚಿತ್ ಸಂಜೀವ್ ಚೊಚ್ಚಲ ಸಿನಿಮಾ ‘ಮ್ಯಾಂಗೋ ಪಚ್ಚ’ ಟೀಸರ್ ಔಟ್!

Btv Kannada
Author: Btv Kannada

Read More