ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪಡೆದ ಸಿನಿಮಾ ಯಾವುದು?
- ವಿನ್ನರ್-ಪಪ್ಪಿ ಸಿನಿಮಾ
- 1st ರನ್ನರ್ ಅಪ್-ಕರಡಿಗುಡ್ಡ ಸಿನಿಮಾ
- 2nd ರನ್ನರ್ ಅಪ್-ಬಾಲ್ಯ ಸಿನಿಮಾ
ಅತ್ಯುತ್ತಮ ಬಾಲ ಕಲಾವಿದ- ಪುರುಷ ವಿಭಾಗ
- ವರುಣ್ ಗಂಗಾಧರ್ – ಸ್ವರಾಜ್ಯ
- ಅತ್ಯುತ್ತಮ ಬಾಲ ಕಲಾವಿದೆ
- ರುತು – ಟೇಕ್ವಾಂಡೋ ಗರ್ಲ್
ಅತ್ಯುತ್ತಮ ಬಾಲ ಕಲಾವಿದ ಮಾಸ್ಟರ್ ಶ್ರೇಯಸ್ – ಜೀನಿಯಸ್ ಮುತ್ತಾ

ಅತ್ಯುತ್ತಮ ಬಾಲ ಕಲಾವಿದೆ
- ಇದು ನಮ್ಮ ಶಾಲೆ -ಪುಣ್ಯಶ್ರೀ
ಅತ್ಯುತ್ತಮ ನಟ
- ವಿಜಯ್ ರಾಘವೇಂದ್ರ -ಜೀನಿಯಾಸ್ ಮುತ್ತಾ
ಅತ್ಯುತ್ತಮ ನಟಿ
- ವೀಣಾ ಸುಂದರ್- ಸ್ವರಾಜ್ಯ
ಅತ್ಯುತ್ತಮ ಪೋಷಕ ನಟ
- ಸುಮನ್ – ಏಕಲವ್ಯ
ಅತ್ಯುತ್ತಮ ಪೋಷಕ ನಟಿ
- ಪದ್ಮ ವಾಸಂತಿ – ಜೀನೀಸ್ ಮುತ್ತಾ
ಅತ್ಯುತ್ತಮ ನಿರ್ದೇಶಕ
- ನಾಗಿಣಿ ಭರಣ-ಜೀನೀಸ್ ಮುತ್ತಾ

ಅತ್ಯುತ್ತಮ ಸಂಕಲನ
- ರವಿಚಂದ್ರನ್ – ಟೇಕ್ವಾಂಡೋ ಗರ್ಲ್
ಅತ್ಯುತ್ತಮ ಗಾಯಕ
- ಶಮಿತಾ ಮಲ್ನಾಡ್- ಚಿಣ್ಣರ ಚಂದ್ರ
ಅತ್ಯುತ್ತಮ ಛಾಯಾಗ್ರಹಣ
- ವಿ. ಪವನ್ ಕುಮಾರ್ -ಕರಡಿ ಗುಡ್ಡ
ಅತ್ಯುತ್ತಮ ಚಿತ್ರಕಥೆ
- ಅಮ್ಮಿತ್ ರಾವ್ – ಕರಡಿ ಗುಡ್ಡ
- ಅತ್ಯುತ್ತಮ PRO ಸುಧೀಂದ್ರ ವೆಂಕಟೇಶ್
ಅತ್ಯುತ್ತಮ ಪ್ರೊಡಕ್ಷನ್ ಹೌಸ್
ವೈ ಮೂವೀಸ್ ಸ್ವರಾಜ್ಯ
ಈ ಹಿಂದೆ ಚಲನಚಿತ್ರೋತ್ಸವ ಅಪ್ಪು ಹೆಸರಿನಲ್ಲಿ ನಡೆದಿತ್ತು. ಪುನೀತ್ ತಮ್ಮ ಸೇವೆಯಿಂದ ಎಲ್ಲರ ಮನಸ್ಸಿನಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಅವರ ಸತ್ಕಾರ್ಯಗಳು ಎಲ್ಲರಿಗೂ ಸ್ಪೂರ್ತಿ ಆಗಬೇಕು. ಅವರ ಹೆಸರಿನಿಂದ ಮಕ್ಕಳ ಚಲನಚಿತ್ರೋತ್ಸವ ಆರಂಭವಾಗಿರುವುದು ನಿಜಕ್ಕೂ ಸಂತಸ ತಂದಿದೆ.
ಇದನ್ನೂ ಓದಿ : ಅದ್ಧೂರಿಯಾಗಿ ಸೆಟ್ಟೇರಿತು ಪ್ರಸನ್ನ ಕುಮಾರ್ ಕೋಟ ನಿರ್ದೇಶನದ “ಹೈಲೆಸ್ಸೂ” – ಸಿನಿಮಾಗೆ ಸುಧೀರ್ ಆನಂದ್ ಹೀರೋ!







